ಪೆರಿಗೇರಿ: ಅಸಮರ್ಪಕ ಚರಂಡಿ ವ್ಯವಸ್ಥೆ -ರಸ್ತೆಯಲ್ಲಿ ತುಂಬಿಕೊಂಡಿದೆ ಕೆಸರು ಮಣ್ಣು…!

0

ಬಡಗನ್ನೂರು:  ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆಯೇ ಹರಿದು ರಸ್ತೆ ತುಂಬಾ ಕೆಸರು ಮಣ್ಣು ತುಂಬಿಕೊಂಡು ಜನ ಸಂಚಾರ, ವಾಹನ ಸಂಚಾರಕ್ಕೆ ತೊಂದರೆಯುಂಟಾದ ಬಗ್ಗೆ ಬಡಗನ್ನೂರು ಗ್ರಾಪಂ ವ್ಯಾಪ್ತಿಯ ಪೆರಿಗೇರಿ ಎಂಬಲ್ಲಿಂದ ವರದಿಯಾಗಿದೆ.

ಕೌಡಿಚ್ಚಾರು-ಮುಡ್ಪಿನಡ್ಕ ಪಿಡಬ್ಲ್ಯೂಡಿ ರಸ್ತೆಯಲ್ಲಿ ಪೆರಿಗೇರಿ ತಿರುವುನಲ್ಲಿ  ಮೇ 23 ರಂದು ಸುರಿದ ಭಾರಿ ಮಳೆಗೆ  ರಸ್ತೆ ಮಧ್ಯೆ ಕೆಸರು ಮಣ್ಣು ತುಂಬಿಕೊಂಡಿದೆ.ರಸ್ತೆಯ ಒಂದು ಭಾಗದಲ್ಲಿ ಚರಂಡಿ ಇದ್ದು ಇನ್ನೊಂದು ಭಾಗದಲ್ಲಿ ಚರಂಡಿ ಇಲ್ಲದೇ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಗುಡ್ಡದಿಂದ ಬರುವ ಮಳೆ ನೀರು ನೇರವಾಗಿ ರಸ್ತೆಗೆ ಬಂದು ಬೀಳುತ್ತಿದ್ದು ಮಳೆನೀರಿನೊಂದಿಗೆ ಬರುವ ಕೆಸರು ಮಣ್ಣು ಕೂಡ ರಸ್ತೆಯಲ್ಲಿ ತುಂಬಿಕೊಳ್ಳುತ್ತಿದೆ. ಚರಂಡಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here