ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ನಿಡ್ಪಳ್ಳಿ ಜನತೆ- ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಒತ್ತಾಯ

0

ನಿಡ್ಪಳ್ಳಿ; ಗ್ರಾಮದ ಹೆಚ್ಚಿನ ಭಾಗದಲ್ಲಿ ಕೆಲವು ತಿಂಗಳುಗಳಿಂದ ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ನಿಡ್ಪಳ್ಳಿ ಜನತೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

 ಗ್ರಾಮದ ನುಳಿಯಾಲು, ಬಂಟಾಜೆ, ಮುಂಡಕೊಚ್ಚಿ, ತಂಬುತ್ತಡ್ಕ ಪರಿಸರದಲ್ಲಿ ಯಾವುದೇ ಕಂಪೆನಿಯ ದೂರವಾಣಿಗೆ ಕೆಲವು ತಿಂಗಳುಗಳಿಂದ ನೆಟ್ವರ್ಕ್ ಸಿಗುತ್ತಿಲ್ಲ.ಹಿಂದೆ ಏರ್ಟೆಲ್, ವೊಡಾಫೋನ್, ಐಡಿಯಾ ಕಂಪೆನಿಗಳ ನೆಟ್ವರ್ಕ್ ಸರಿಯಾಗಿ ಸಿಗುತ್ತಿತ್ತು.ಆದರೆ ಈಗ  ಯಾವುದೇ ಕರೆ ಬಂದರೂ ಮೊಬೈಲ್ ಹಿಡಿದುಕೊಂಡು ಟೆರೆಸ್ಸ್ ಮೇಲೋ ಅಥವಾ ಮರ ಹತ್ತಿಯೋ ಮಾತಾಡುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಪ್ರಮುಖ ಸಂದೇಶ ಬಂದರೆ ಡೌನ್‌ಲೋಡ್ ಮಾಡಲು ಹರಸಾಹಸ ಪಡಬೇಕಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ಸಮಸ್ಯೆಯಿಂದಾಗಿ ಕೆಲವು ಇಲಾಖೆಯಿಂದ ಬರುವ ಪ್ರಾಮುಖ್ಯವಾದ ಮೆಸೇಜ್  ಡೌನ್‌ಲೋಡ್ ಆಗದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ  ಪ್ರಸಂಗವೂ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ.ಆದುದರಿಂದ ಈ ಪರಿಸರದಲ್ಲಿ ಒಂದು ಟವರ್ ಅವಶ್ಯಕತೆ ಇದೆ ಎಂದು ಈ ಭಾಗದ ಜನರು ಅಭಿಪ್ರಾಯ ಪಡುತ್ತಿದ್ದಾರೆ. ಗ್ರಾಮದಲ್ಲಿ ಈಗ ಇರುವ ಟವರ್ ಪವರನ್ನು ಕಡಿಮೆ ಮಾಡಿರ ಬಹುದು ಅದರಿಂದ ಈ ಸಮಸ್ಯೆ ಉಂಟಾಗಿರಲೂ ಸಾಧ್ಯತೆ ಇದೆ ಎಂದೂ ಇಲ್ಲಿಯ ಜನರ ಅಭಿಪ್ರಾಯವೂ ಆಗಿದೆ. ಇನ್ನೇನು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿದ್ದು ನೆಟ್ವರ್ಕ್ ಇಲ್ಲದಿದ್ದರೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೂ ಬಹಳ ತೊಂದರೆ ಆಗುತ್ತದೆ. ಸಮಸ್ಯೆ ಏನಿದ್ದರೂ ಇದಕ್ಕೆ ಸಂಬಂಧ ಪಟ್ಟವರು ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ನೀಡುವರೆ ಕಾದು ನೋಡಬೇಕಾಗಿದೆ.

     ನೆಟ್ವರ್ಕ್ ಇಲ್ಲದೆ ಬಹಳ ತೊಂದರೆ ಯಾಗಿದೆ- ನಮ್ಮ ಗ್ರಾಮ ಅಭಿವೃದ್ಧಿ ಹೊಂದುತ್ತಿದ್ದರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.ಗ್ರಾಮದ ನುಳಿಯಾಲು, ಬಂಟಾಜೆ, ಬ್ರಹ್ಮರಗುಂಡ ಅಲ್ಲದೆ ಇತರ ಕಡೆಯೂ ಕೆಲವು ತಿಂಗಳುಗಳಿಂದ ದೂರವಾಣಿ ನೆಟ್ವರ್ಕ್ ಇಲ್ಲದೆ ಜನ ಬಹಳ ತೊಂದರೆಗೆ ಒಳಗಾಗಿದ್ದಾರೆ.ಕಾಲ್ ಅಥವಾ ಮೆಸೇಜ್ ಬಂದರೆ ಎತ್ತರದ ಪ್ರದೇಶಕ್ಕೆ ಓಡಬೇಕು.ಆದುದರಿಂದ ಈ ಸಮಸ್ಯೆಯನ್ನು ಸಂಬಂಧಿಸಿದವರು ಶೀಘ್ರವಾಗಿ ಪರಿಹರಿಸಬೇಕು ಎಂಬುದೇ ನಮ್ಮೆಲ್ಲರ ಒತ್ತಾಯ.
ರಾಜೇಶ್ ನೆಲ್ಲಿತ್ತಡ್ಕ

LEAVE A REPLY

Please enter your comment!
Please enter your name here