ಪುತ್ತೂರು: ಕೆನರಾ ಬ್ಯಾಂಕ್ ನೆಹರು ನಗರ ಶಾಖೆಯ ಸೀನಿಯರ್ ಸಿ ಎಸ್ ಎ ಪಾರ್ವತಿ ಸಿ ನ.30ರಂದು ವಯೋನಿವೃತ್ತಿ ಹೊಂದಿದ್ದಾರೆ.
ಇವರಿಗೆ ಕೆನರಾ ಬ್ಯಾಂಕ್ ನೆಹರು ನಗರ ಶಾಖೆ ಮೆನೇಜರ್ ಹಾಗೂ ಸಿಬ್ಬಂದಿಗಳಿಂದ ಬೀಳ್ಕೊಡುಗೆ ಕಾರ್ಯಕ್ರಮ ಮಾಡಿದರು.
ಮಂಜೇಶ್ವರ ತಾಲೂಕು ಕೋಳ್ಯೂರು ಗ್ರಾಮದ ಗೋಪಾಲಕೃಷ್ಣ ಭಟ್ ಸಿ ಮತ್ತು ಪರಮೇಶ್ವರಿ ಅವರ ಪುತ್ರಿಯಾಗಿರುವ ಇವರು, ಪ್ರಾಥಮಿಕ ಶಿಕ್ಷಣವನ್ನು ಕೋಳ್ಯೂರು ಶ್ರೀ ಶಂಕರನಾರಾಯಣ ಕಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ವಾಣಿ ವಿಜಯ ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು ಸರಕಾರಿ ಕಾಲೇಜು, ಮಂಗಳೂರು ಇಲ್ಲಿ ಪೂರೈಸಿ 12 -10 -1992 ರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಆಯ್ಕೆಗೊಂಡು, ಸುಮಾರು 33 ವರ್ಷಗಳ ಕಾಲ ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಾದ ಮಡಿಕೇರಿ, ಸಂಪಾಜೆ, ಪುತ್ತೂರು, ಬಂಟ್ವಾಳ, ಎಣ್ಮೂರು ಹಾಗೂ ಪ್ರಸ್ತುತ ನೆಹರುನಗರ ಪುತ್ತೂರು ಶಾಖೆಯಲ್ಲಿ ಸೇವೆ ಸಲ್ಲಿಸಿ ಒಟ್ಟು ಸುಮಾರು 33 ವರ್ಷಗಳ ಕಾಲ ಸುದೀರ್ಘವಾದ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ.
ಪತಿ ಶ್ರೀ ಸುಬ್ರಹ್ಮಣ್ಯ ಭಟ್ ಕೆ, ಮಕ್ಕಳಾದ ಮಧುರಾ ಕೆಎಸ್ ಮಾನಸ ಕೆ.ಎಸ್ ,ವಿವೇಕಾನಂದ ಇಂಜಿನೀರಿಂಗ್ ಕಾಲೇಜು ವಿದ್ಯಾರ್ಥಿ ಸಾಯಿ ಮಹೇಶ ಕೆ ಎಸ್ .ರೊಂದಿಗೆ ವಾಸವಾಗಿದ್ದಾರೆ.
