ಕೆಮ್ಮಾಯಿ ಭರತಪುರ ಶ್ರೀಪಂಚಮುಖಿ ಹನುಮಾನ್ ಮಂದಿರದಲ್ಲಿ ಸಾಮೂಹಿಕ ಹನುಮಯಜ್ಞ, ಸಾಮೂಹಿಕ ರುದ್ರ ಹೋಮ,

0

ಶ್ರೀಪಂಚಮುಖಿ ಹನುಮಾನ್ ದೇವರಿಗೆ 108 ಸೀಯಾಳ ಅಭಿಷೇಕ

ಕೆಮ್ಮಾಯಿ: ಇಲ್ಲಿನ ಭರತಪುರ ಶ್ರೀ ಪಂಚಮುಖಿ ಹನುಮಾನ್ ಮಂದಿರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕ ಹನುಮದೋಪಾಸಕ ಡಾ| ರಾಮಚಂದ್ರ ಗುರೂಜಿಯವರ ಶುಭಾಶೀರ್ವಾದಗಳೊಂದಿಗೆ ಏಕ ಜಾತಿ ಧರ್ಮ ಪೀಠಾಧೀಶ್ವರರಾದ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಹನುಮಯಜ್ಞ, ಅಘೋರ್ ಅಖಾಡ್ ನಾಥ್‌ಪಂತ್‌ದ ಮದನ್‌ನಾಥ ಜೀ ಗುರೂಜಿಯವರ ನೇತೃತ್ವದಲ್ಲಿ ಸಾಮೂಹಿಕ ರುದ್ರ ಹೋಮ, ಶ್ರೀ ಪಂಚಮುಖಿ ಹನುಮಾನ್ ದೇವರಿಗೆ 108 ಸೀಯಾಳ ಅಭಿಷೇಕ ಮೇ.12ರಂದು ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹವನ, ಸಾಮೂಹಿಕ ಹನುಮಯಜ್ಞ, ಹನುಮಾನ್ ಚಾಲಿಸಾ ಪಾರಾಯಣ, 8 ಗಂಟೆಯಿಂದ ಶ್ರೀ ಪಂಚಮುಖಿ ಹನುಮಾನ್ ದೇವರಿಗೆ 108 ಸೀಯಾಳ ಅಭಿಷೇಕ, 9 ಗಂಟೆಯಿಂದ ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ, 10 ಗಂಟೆಗೆ ರುದ್ರ ಹೋಮ ಪ್ರಾರಂಭ, ಮಧ್ಯಾಹ್ನ 12.30 ರಿಂದ ಪೂರ್ಣಾಹುತಿ, ಮಂಗಳಾರತಿ ಮತ್ತು ಪ್ರಸಾದ ವಿತರಣೆ, 1 ಗಂಟೆಯಿಂದ ಪ್ರಸಾದ ಭೋಜನ ವಿತರಣೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಟೀಮ್ ಒಳಿತು ಮಾಡು ಮನುಷ ತಂಡದ ಆಹಾರ ಸಾಮಾಗ್ರಿ ವಿತರಣೆ, ಶ್ರೀಸೌಭಾಗ್ಯ (ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು) ಉಚಿತ ಚಿನ್ನದ ಮೂಗುತಿ ವಿತರಣೆ, ಸಂಜೆ 4 ಗಂಟೆಯಿಂದ ಶ್ರೀ ಪಂಚಮುಖಿ ಹನುಮಾನ್ ಮಕ್ಕಳ ಕುಣಿತ ಭಜನಾ ತಂಡ ಕೆಮ್ಮಾಯಿಯವರಿಂದ ಕುಣಿತ ಭಜನೆ ನಡೆಯಿತು. ರಾತ್ರಿ 8 ಗಂಟೆಗೆ ಶ್ರೀ ಸತ್ಯದೇವತೆ ಕಲ್ಲುರ್ಟಿ ಚಾವಡಿಯಲ್ಲಿ ಶ್ರೀಸತ್ಯದೇವತೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ಶ್ರೀಪಂಚಮುಖಿ ಹನುಮಾನ್ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here