ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಕ್ಷಗಾನ ಪ್ರದರ್ಶನ

0

ಬೆಟ್ಟಂಪಾಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಕಾಲೇಜಿನ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ “ರಾಧಾ ವಿಲಾಸ – ಕಂಸ ವಧೆ – ಅಗ್ರ ಪೂಜೆ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಭಾಗವತರಾಗಿ ಸುಧೀಶ್ ಪಾಣಾಜೆ, ಚೆಂಡೆ ರಾಜೇಂದ್ರ ಭಟ್ ಪುಂಡಿಕೈ, ಹಿರಿಯ ವಿದ್ಯಾರ್ಥಿ ರೋಷನ್ ಕಾಟುಕುಕ್ಕೆ, ಮದ್ದಳೆಯಲ್ಲಿ ಪವನ್ ತೃತೀಯ ಬಿ ಬಿ ಎ ಹಾಗೂ ಚಕ್ರ ತಾಳದಲ್ಲಿ ರವಿರಾಜ್ ಪಾಣಾಜೆ ಸಹಕರಿಸಿದರು.

ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು ‘ಕಾಲೇಜು ಯಕ್ಷಗಾನದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಲ್ಲದೆ ಯಕ್ಷಗಾನದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಐ ಕ್ಯೂ ಎ ಸಿ ಮತ್ತು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲ ಹಾಗೂ ಸಹಕಾರದಿಂದ ಯಕ್ಷಗಾನ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಮೂಡಿ ಬರಲು ಸಾಧ್ಯವಾಯಿತೆಂದು ಯಕ್ಷಗಾನ ಕಲಾ ಸಂಘದ ಸಂಚಾಲಕ ರಾಮ ಕೆ. ರವರು ಹೇಳಿದರು. ಪ್ರಸಂಗ ಸಂಯೋಜನೆಯಲ್ಲಿ ನಾಟ್ಯ ಗುರು ಬಾಲಕೃಷ್ಣ ಉಡ್ಡಂಗಳ ಸಹಕರಿಸಿದರು.

LEAVE A REPLY

Please enter your comment!
Please enter your name here