ಮೇ.29: ನರಿಮೊಗರು ಪ್ರಾ.ಕೃ. ಸಹಕಾರ ಸಂಘದಿಂದ ರಸಗೊಬ್ಬರ, ಕೀಟನಾಶಕಗಳ ಸಮರ್ಪಕ ಬಳಕೆ ಬಗ್ಗೆ ಮಾಹಿತಿ, ಕೃಷಿ ಮಾಹಿತಿ ಕಾರ್ಯಾಗಾರ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗಾಗಿ ಬೆಳೆಗಳಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳ ಸಮರ್ಪಕ ಬಳಕೆ ಬಗ್ಗೆ ಮಾಹಿತಿ, ಅಡಿಕೆ ಬೆಳೆ ಹಾಗೂ ಇತರೆ ಬೆಳೆಗಳನ್ನು ಬೆಳೆಸುವ ಬಗ್ಗೆ ಒಂದು ದಿನದ ಕೃಷಿ ಮಾಹಿತಿ ಕಾರ್ಯಾಗಾರವು ಮೇ.29ರಂದು ಬೆಳಿಗ್ಗೆ10.30ಕ್ಕೆ ಸಂಘದ ಸಭಾ ಭವನದಲ್ಲಿ ನಡೆಯಲಿದೆ.


ಸಂಘದ ಅಧ್ಯಕ್ಷ ನವೀನ್ ಡಿ. ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸ್ಟೈನ್ಸ್ ಅಂಡ್ ಕಂಪನಿಯ ವಲಯ ವ್ಯವಸ್ಥಾಪಕ ಡಾ. ತೇಜಾಶಂಕರ್, ಹಾಗೂ ಕ್ಷೇತ್ರ ವ್ಯವಸ್ಥಾಪಕ ಟಿ ಸುಬ್ರಹ್ಮಣ್ಯಂರವರು ಆಗಮಿಸಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಕೃಷಿಕ ಸದಸ್ಯರು ಇದರ ಸದುಪಯೋಗವನ್ನು ಪಡಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here