ಬಿಳಿನೆಲೆ: ಟಾಟಾ ಸುಮೋ-ಆಲ್ಟೋ ಕಾರು ನಡುವೆ ಡಿಕ್ಕಿ-ಎರಡೂ ವಾಹನಗಳು ಜಖಂ-ಹಲವರಿಗೆ ಗಾಯ

0

ಕಡಬ: ಟಾಟಾ ಸುಮೋ ಹಾಗೂ ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನದಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ಮೇ 26ರಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೋಟೇ ಸಾರು ನರ್ಸರಿ ಬಳಿ ನಡೆದಿದೆ.


ಮೇ 26ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಬೆದ್ರುಮಾರು ನಿವಾಸಿ ದೀಕ್ಷಿತ್ ಎಂಬವರು ಟಾಟಾ ಸುಮೋ (ಕೆಎ 20, ಸಿ 0589)ವಾಹನದಲ್ಲಿ ಬಾಡಿಗೆ ನಿಮಿತ್ತ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬಂದು ದೇವರ ದರ್ಶನ ಮಾಡಿ ವಾಪಸ್ಸು ಧರ್ಮಸ್ಥಳ ಕಡೆಗೆ ಬರುತ್ತಿರುವಾಗ ಬಿಳಿನೆಲೆ ಗ್ರಾಮದ ಕೊಟೇ ಸಾರು ನರ್ಸರಿ ಬಳಿ ಕಡಬ ಕಡೆಯಿಂದ ಹೋಗುತ್ತಿದ್ದ ಅಲ್ಟೋ 800 ಕಾರು(ಕೆಎಲ್ 14, ಯು 4673) ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎರಡು ವಾಹನಗಳೂ ಜಖಂಗೊಂಡಿವೆ. ಟಾಟಾ ಸುಮೋದಲ್ಲಿದ್ದ ಪ್ರಯಾಣಿಕರಾದ ಲಂಕೇಶ್‌ಕುಮಾರ್, ಸ್ವರ್ಣಲತಾ ,ಅಶ್ವಿನಿ, ನಂದಿನಿರವರಿಗೆ ಗಾಯವಾಗಿದೆ. ಅಲ್ಟೋ ಕಾರಿನಲ್ಲಿದ್ದ ಪ್ರಕಾಶ್, ಹೊನ್ನಮ್ಮ, ನಿಶಾ, ಮಾಲತಿ,ಸಾವಿತ್ರಿ ಹಾಗೂ ಮಕ್ಕಳಾದ ರಿತಿಕ, ಚಾರ್ವಿಕ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳು ಪುತ್ತೂರು ಸಿ.ಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟಾಟಾ ಸುಮೋ ಚಾಲಕ ದೀಕ್ಷಿತ್‌ರವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here