ಅಡ್ಯನಡ್ಕ: ಜನತಾ ಹಿ. ಪ್ರಾ.ಶಾಲೆಯಲ್ಲಿ ರಕ್ತದಾನ ಶಿಬಿರ

0

ವಿಟ್ಲ: ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಕೇಪು ಗ್ರಾಮ ಪಂಚಾಯತ್ ಮತ್ತು ಪುಣಚ ಗ್ರಾಮ ಪಂಚಾಯತ್, ಬಪುಣಚ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಪ್ರಾದೇಶಿಕ ರಕ್ತಪೂರಣ ಕೇಂದ್ರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಡ್ಯನಡ್ಕ ಅನುದಾನಿತ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. 

ಶಿಬಿರವನ್ನು ಕೇಪು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರಾಘವ ಮಣಿಯಾಣಿ ರವರು ಉದ್ಘಾಟಿಸಿದರು.  ಪುಣಚ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಬೇಬಿ, ಪುಣಚ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜನಾರ್ದನ  ಭಟ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಯನಡ್ಕದ ವೈದ್ಯಾಧಿಕಾರಿ  ಡಾ. ವಿಶ್ವೇಶ್ವರ ವಿ.ಕೆ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. 

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ಆಂಟನಿರವರು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.    ಶಿಬಿರಕ್ಕೆ ಕಲ್ಪವೃಕ್ಷ  ಫ್ರೆಂಡ್ಸ್ ಪುಣಚ, ಶ್ರೀ ಕೃಷ್ಣ ಯುವಕ ಸಂಘ ಕೂಟೇಲು, ಬ್ರಿಗೇಡ್ ಬ್ರದರ್ಸ್ ಅಡ್ಯನಡ್ಕ, ದಿವ್ಯಶಕ್ತಿ ಯುವಕ ಯುವತಿ ಮಂಡಲ ಕುದ್ದುಪದವು , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡ್ಯನಡ್ಕ ಒಕ್ಕೂಟ (ವಿಪತ್ತು ನಿರ್ವಹಣಾ ತಂಡ ಕೇಪು) ಸಹಕರಿಸಿದರು. ಇದೇ ಸಂದರ್ಭದಲ್ಲಿ ಒಟ್ಟು 39 ದಾನಿಗಳು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here