





ಪುತ್ತೂರು: ಮೈಸೂರಿನ ’ಕುಮಾರ್ ಪ್ರದರ್ಶನ ಕಲೆಗಳ ಕೇಂದ್ರ’ ಸಂಸ್ಥೆಯವರು ನಡೆಸುವ ಸರಣಿ ಕಾರ್ಯಕ್ರಮ ’ನಿರಂತರ ಕಲೆಮನೆ ಉತ್ಸವ’ದ 39ನೇ ಆವೃತ್ತಿಯಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ದಂಪತಿ ಕಲಾದೀಪ ಖ್ಯಾತಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರು ಭರತನಾಟ್ಯ ಪ್ರದರ್ಶನ ನೀಡಿದರು.
















