ಪುತ್ತೂರು: ಆಗಸ್ಟ್ 2023ರಲ್ಲಿ ನಡೆದ ಅಂತಿಮ ವರ್ಷದ ಬಿಸ್ಸಿ(food, nutrition and dietitics) ಪರೀಕ್ಷೆಯಲ್ಲಿ ಪುತ್ತೂರು ನಿವಾಸಿ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದ್ಯುತಿ ಡಿ. ರಾವ್ ರವರು ಶೇ.91.74 ಶ್ರೇಣಿಯೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.
ಇವರು ದರ್ಬೆ ಪರ್ಲಡ್ಕ ನಿವಾಸಿ, ಪುತ್ತೂರು ಫಿಲೋಮಿನಾ ಕಾಲೇಜು ಹಾಗೂ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಪ್ರೊ|ದತ್ತಾತ್ರೇಯ ರಾವ್ ಹಾಗೂ ಸಂಧ್ಯಾ ಕೆ.ರವರ ಪುತ್ರಿ.