ಕಂಬಳಬೆಟ್ಟುವಿನಲ್ಲಿ ದರ್ಸ್ ಪುನರಾರಂಭ, ಕ್ಯಾಂಟೀನ್ ಕಟ್ಟಡ ಉದ್ಘಾಟನೆ

0

ವಿಟ್ಲ: ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತಿನ ಅಧೀನದಲ್ಲಿ ಮೇ.28ರಂದು ಝೈನುಲ್ ಉಲಮಾ ಮಾಣಿ ಹಮೀದ್ ಮುಸ್ಲಿಯಾರ್ ಅವರು ದರ್ಸ್ ವಿದ್ಯಾಭ್ಯಾಸ ಕೇಂದ್ರ ಹಾಗೂ ಕ್ಯಾಂಟೀನ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಕಂಬಳಬೆಟ್ಟುವಿನಲ್ಲಿ ಸರಿಸುಮಾರು 1978 ನೇ ಇಸವಿ ಅಂದರೆ 46 ವರ್ಷಗಳ ಹಿಂದೆ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಉಳ್ಳಾಲ ಅವರ ದಿವ್ಯ ಹಸ್ತ ಹಾಗೂ ಆದೂರು ಹಸನ್ ಉಸ್ತಾದ್ ಅವರ ನೇತೃತ್ವದಲ್ಲಿ ಆರಂಭಗೊಂಡ ದರ್ಸ್ ವಿದ್ಯಾಭ್ಯಾಸದ ಪಾರಂಪರ್ಯವು ಮಾಸುವ ಮುನ್ನವೇ ಎಲ್ಲಾ ಸೌಲಭ್ಯದೊಂದಿಗೆ ಮರು ಸ್ಥಾಪನೆ ಗೊಂಡಿರುವುದು ಕಂಬಳಬೆಟ್ಟು ಪರಿಸರದ ಜನರಲ್ಲಿ ಆಧ್ಯಾತ್ಮಿಕತೆಯ ಮಂದಹಾಸ ಮೂಡಿಸಿದೆ.

ಕ್ಯಾಂಟೀನ್ ಕಟ್ಟಡವನ್ನು ಮರ್ಹೂಮ್ ಅಝೀಝ್ ಬದ್ರಿಯ ಅವರ ಮಕ್ಕಳು ನಿರ್ಮಿಸಿ ಕೊಟ್ಟರೆ, ಅಡುಗೆ ಮಾಡಲು ಪಾತ್ರೆಗಳು ಮತ್ತು ಇತರ ಸೌಕರ್ಯಗಳನ್ನು ಜಮಾಅತಿನ ದಾನಿಗಳು ಸಹಕಾರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಖತೀಬರಾದ ಇಬ್ರಾಹಿಂ ಮದನಿ, ಅಬೂ ಸ್ವಾಲಿಹ್ ಸಖಾಫಿ ಬೆಳ್ಮ, ಹಾಫಿಲ್ ಅಹ್ಮದ್ ಕಾಮಿಲ್ ಸಖಾಫಿ ಮಳಲಿ, ಮಾಜಿ ಅಧ್ಯಕ್ಷರಾದ ವಿ.ಕೆ ಖಾದರ್ ಹಾಜಿ ಬದ್ರಿಯ, ಮೊಯ್ದು ಹಾಜಿ ದರ್ಬಾರ್, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬಾಂಬೆ, ಕೋಶಧಿಕಾರಿ ಅಬೂಬಕ್ಕರ್ ನೆಕ್ಕರೆ ಮಹಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್, ಶಾಂತಿ ನಗರ ಮದ್ರಸ ಅಧ್ಯಕ್ಷ ಅಬ್ದುಲ್ ರಝಾಕ್(ಮೋನು), ಹಾಜಿ ಸುನ್ನಿ ಖಾದರ್, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಗಫೂರ್, ಮುಹಮ್ಮದ್ ಯಾಸಿರ್ ಮೊದಲಾದ ಉಪಸ್ಥಿತರಿದ್ದರು.

ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತ್ ಅಧ್ಯಕ್ಷರಾದ ಡಾ| ವಿ. ಕೆ ಬಷೀರ್ ಸ್ವಾಗತಿಸಿದರು. ಉಮ್ಮರ್ ಸಖಾಫಿ ಕಂಬಳಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here