ಪುತ್ತೂರು: ವಿವೇಕಾನಂದ ಪದವಿ ಕಾಲೇಜಿಗೆ 3 ರ‍್ಯಾಂಕ್

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-2023ರ ಸಾಲಿನ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ಮೂರು ರ‍್ಯಾಂಕ್‌ಗಳು ಲಭ್ಯವಾಗಿವೆ. ಬಿಎಸ್ಸಿ ಪರೀಕ್ಷೆಯಲ್ಲಿ ಪಿಎಂಸಿ ವಿಭಾಗದಲ್ಲಿ ಶರಧಿ ಎಸ್.ಕೆ 4200 ರಲ್ಲಿ 4087 ಅಂಕಗಳನ್ನು ಪಡೆದುಕೊಂಡು ಐದನೇಯ ರ‍್ಯಾಂಕನ್ನು ಪಡೆದುಕೊಂಡಿದ್ದಾರೆ. ಇವರು ವಿಟ್ಲದ ಕೇಶವಯ್ಯ ಎಸ್ ಹಾಗೂ ಶಶಿಕಲಾ ದಂಪತಿಯ ಪುತ್ರಿ. ಕಲಾ ವಿಭಾಗದ ಪರೀಕ್ಷೆಯಲ್ಲಿ ಎಚ್‌ಇಪಿ ವಿಭಾಗದಲ್ಲಿ ಸೃಜನಿ ಎಸ್.ಆರ್ 4200ರಲ್ಲಿ 3748 ಅಂಕ ಪಡೆದುಕೊಂಡು ಐದನೇಯ ರ‍್ಯಾಂಕನ್ನು ಗಳಿಸಿಕೊಂಡಿದ್ದಾರೆ. ಇವರು ಕಡಬದ ರಾಮಚಂದ್ರ ಹಾಗೂ ಭವಾನಿ ದಂಪತಿ ಪುತ್ರಿ. ಕಲಾ ವಿಭಾಗದ ಪರೀಕ್ಷೆಯಲ್ಲಿ ಎಚ್‌ಇಪಿ ಯ ಇನ್ನೋರ್ವ ವಿದ್ಯಾರ್ಥಿ ವೀರೇಶ 4200 ರಲ್ಲಿ 3726 ಅಂಕ ಪಡೆದು ಒಂಭತ್ತನೇಯ ರ‍್ಯಾಂಕನ್ನು ಗಳಿಸಿದ್ದಾರೆ. ಇವರು ರಾಯಚೂರಿನ ಮಾನ್ವಿ ತಾಲೂಕಿನ ನಾರಾಯಣಪ್ಪ ಹಾಗೂ ಹನುಮಂತಿ ದಂಪತಿಯ ಪುತ್ರ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here