





ನೆಲ್ಯಾಡಿ: ಗೋಳಿತ್ತಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮುಂಭಾಗದ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಯಿತು. ವಿಶೇಷವಾಗಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಯಿತು.


ಪೋಷಕರ ಸಭೆ ನಡೆಸಿ ವಿವಿಧ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಬಿ.ಎಂ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಅವರು ಶಾಲಾ ಭೌತಿಕ ವಿಚಾರಗಳ ಬಗ್ಗೆ ಮಾತನಾಡಿ ಶುಭಕೋರಿದರು. ಉಪಾಧ್ಯಕ್ಷೆ ಹಸೀನಾ ಪರ್ವಿಂತಾಜ್ ಮತ್ತು ಗ್ರಾ.ಪಂ. ಮಾಜಿ ಸದಸ್ಯ ನೋಣಯ್ಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಜಾನ್ ಕೆ.ಪಿ, ತೇಜಸ್ವಿ ಕೆ, ಅಬ್ದುಲ್ ಲತೀಫ್ ಸಿ, ಮನ್ವಿತ ಡಿ ಮತ್ತು ಯಶಸ್ವಿನಿ ಉಪಸ್ಥಿತರಿದ್ದರು.














