ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ

0

ಬಡಗನ್ನೂರುಃ ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ 2024 -25 ನೇ ಶೈಕ್ಷಣಿಕ ವರ್ಷದ ಶಾಲಾ  ಪ್ರಾರಂಭೋತ್ಸವ ಮೇ  31ರಂದು ನಡೆಯಿತು.

ಪಟ್ಟೆ ವಿದ್ಯಾ ಸಂಸ್ಥೆಗಳಾದ ಶ್ರೀಕೃಷ್ಣ ಹಿರಿಯ  ಪ್ರಾರ್ಥಮಿಕ ಶಾಲೆ  ಹಾಗೂ ಪ್ರತಿಭಾ ಪ್ರೌಢಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಮೆರವಣಿಗೆ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.ವಿದ್ಯಾಸಂಸ್ಥೆಗಳ  ಸಂಚಾಲಕರಾದ  ನಾರಾಯಣ ಭಟ್  ಬಿರ್ನೋಡಿ ರವರು  ಶಾಲಾ ಪ್ರಾರಂಭೋತ್ಸವ ಸಭಾ ಕಾರ್ಯಕ್ರಮವನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ  ನಹುಷ. ಪಿ ರವರು ವಹಿಸಿ,, ನೂತನವಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.  ವಿದ್ಯಾ ಸಂಸ್ಥೆ ಗಳ  ನಿರ್ದೇಶಕರಾದ  ಶಿವಪ್ರಸಾದ್ ಪಟ್ಟೆ ಹಾಗೂ ಶಿರೀಷ್. ಪಿ.ಬಿ ರವರು  ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ಪೆನ್ನು,ಪೆನ್ಸಿಲ್, ಪುಸ್ತಕಗಳನ್ನು ನೀಡಿ  ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸರಕಾರದಿಂದ ನೀಡಲಾದ ಉಚಿತ ಪಠ್ಯ ಪುಸ್ತಕಗಳನ್ನು1 ನೇ ತರಗತಿಯಯಿಂದ10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಗುರುಗಳಾದ  ಸುಮನ  ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ  ರಾಜಗೋಪಾಲ್  ಪ್ರಾಸ್ತಾವಿಕ ಮಾತನಾಡಿದರು.  . ಪ್ರಾಥಮಿಕ ಶಾಲೆ ಶಿಕ್ಷಕ  ರಾಮಚಂದ್ರಪ್ಪ ವಂದಿಸಿದರು. ಪ್ರೌಢಶಾಲಾ ಶಿಕ್ಷಕ ವಿಶ್ವನಾಥ್. ಬಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ  ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ, ಸಹ ಶಿಕ್ಷಕರಾದ  ಭವಿತಾ, ಜಯಶ್ರೀ, ಪ್ರೀತಿ ಕುಮಾರಿ,ವಿಠಲ ಸುವರ್ಣ, ಪ್ರಾಥಮಿಕ ಶಾಲಾ ಶಿಕ್ಷಕರಾದ  ಧನಲಕ್ಷ್ಮಿ, ಮಮತಾ, ಪುಷ್ಪ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here