ಮಂಗಳೂರು ವಿಶ್ವದ್ಯಾನಿಲಯದ ವೈದ್ಯಕೀಯ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ಪರೀಕ್ಷೆ – ಅವನಿ ಎಸ್ ಕುಂಜತ್ತಾಯ ರವರಿಗೆ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ

0

ಮಂಗಳೂರು: 2023 ಆಗಸ್ಟ್ ತಿಂಗಳಿನಲ್ಲಿ ನಡೆದ ವೈದ್ಯಕೀಯ ಭೌತಶಾಸ್ತ್ರ(Msc Medical Physics) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಾವು ಅವನಿ ಎಸ್ ಕುಂಜತ್ತಾಯ ರವರು ಪ್ರಥಮ ರಾಂಕ್ ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ದಿ|ಸುಬ್ರಹ್ಮಣ್ಯ ಕುಂಜತ್ತಾಯ ಮತ್ತು ಅಮಿತಾ ಕುಂಜತ್ತಾಯ ಇವರ ಸುಪುತ್ರಿ. ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಆಗಿರುವ ಇವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ.ಮಾ.ಹಿ.ಪ್ರಾ. ಶಾಲೆ ಕಾವು ಇಲ್ಲಿ ಪಡೆದಿದ್ದು ನಂತರ ಪ್ರೌಢಶಾಲಾ ಶಿಕ್ಷಣವನ್ನು ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ ಹಾಗು ಜವಾಹರ್ ನವೋದಯ ವಿದ್ಯಾಲಯ, ಮುಡಿಪು ಇಲ್ಲಿ ಮುಗಿಸಿರುತ್ತಾರೆ. ಇದೇ ಜೂನ್ ತಿಂಗಳ 15 ರಂದು ಮಂಗಳೂರು ವಿಶ್ವದ್ಯಾನಿಲಯದಲ್ಲಿ ನಡೆಯಲಿರುವ 42ನೇ ವಾರ್ಷಿಕ ಘಟಕೋತ್ಸವದಲ್ಲಿ ಗವರ್ನರ್ ತಾವರ್ ಚಂದ್ ಗೆಹ್ಲೋಟ್ ರವರಿಂದ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here