ಪುತ್ತೂರಿನ ಮತದಾರೊಬ್ಬರ ಹೆಸರು ಬೆಳ್ತಂಗಡಿ ಮತಗಟ್ಟೆಗೆ – ಯಾರು ಹೊಣೆ? ಮತದಾರನ ಪ್ರಶ್ನೆ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ನೈರುತ್ಯ ಪದವೀಧರ ಚುನಾವಣೆಯಲ್ಲಿ ಪುತ್ತೂರಿನಲ್ಲೇ ಮತ ಚಲಾಯಿಸುತ್ತಿದ್ದ ಪುತ್ತೂರು ಕಸಬ ನಿವಾಸಿಯೊಬ್ಬರ ಹೆಸರು ಬೆಳ್ತಂಗಡಿ ಮತಗಟ್ಟೆಗೆ ವರ್ಗಾವಣೆಗೊಂಡಿದೆ. ಇದಕ್ಕೆ ಯಾರು ಹೊಣೆ ಎಂದು ಇಲಾಖೆಯನ್ನು ಮತದಾರರು ಪ್ರಶ್ನಿಸಿದ್ದಾರೆ.

ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ಬಳಿಯ ಖಾಯಂ ನಿವಾಸಿ ಜಿನ್ನಪ್ಪ ಗೌಡ ಮಳವೇಲು ಅವರ ಹೆಸರು ಪುತ್ತೂರು ಮತಗಟ್ಟೆಯಿಂದ ಬೆಳ್ತಂಗಡಿಯ ಬೂತ್ ಮತಗಟ್ಟೆ ಸಂಖ್ಯೆ 21, ಸೀರಿಯಲ್ ನಂ 305 ಕ್ಕೆ ಹಾಕಲಾಗಿದೆ. ಇಲಾಖೆಯ ತಪ್ಪಿನಿಂದ ನನಗೆ ಮತ ಚಲಾಯಿಸಲು ಆಗಿಲ್ಲ. ಇದಕ್ಕೆ ಯಾರು ಹೊಣೆ ಎಂದು ಜಿನ್ನಪ್ಪ ಗೌಡ ಮಳವೇಲು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here