ಚುನಾವಣೆಯಲ್ಲಿ ಗೆದ್ದವರು ಮೋದೀಜೀ, ರಾಹುಲ್‌ಜೀಯವರ ಸೇವಕರಾಗದೆ ಆರಿಸಿದ ಕ್ಷೇತ್ರದ ಜನರ ಸೇವಕರಾಗಲಿ- ಪಕ್ಷಭೇದ ಬಿಟ್ಟು ಜನರ ಹಿತ ಕಾಪಾಡುವುದೇ ದೊಡ್ಡ ಜನಸೇವೆ. ಅದಕ್ಕಾಗಿಯೇ ಜನಪ್ರತಿನಿಧಿಯಾಗಿ ಆಯ್ಕೆ

0

ಮಹಾತ್ಮ ಗಾಂಧಿಯವರ ಆಶಯದ ಗ್ರಾಮ ಸ್ವರಾಜ್ಯ, ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಹಲವಾರು ವರ್ಷಗಳಿಂದ ಆಂದೋಲನ ನಡೆಸುತ್ತಿದ್ದೇನೆ. ಅದನ್ನು ದೇಶವ್ಯಾಪಿ, ರಾಜ್ಯ ವ್ಯಾಪಿ ಮಾಡಲು ಪ್ರಯತ್ನಿಸಿದ್ದೇನೆ. ಈ ಸಲ ಅದನ್ನು ಕಾರ‍್ಯರೂಪಕ್ಕೆ ತರಲು ಮೋದೀಜಿಯವರ ಕ್ಷೇತ್ರ ವಾರಣಾಸಿಯಲ್ಲಿ ಹಾಗೂ ದೇಶದ ರಾಜಧಾನಿ ಡೆಲ್ಲಿಯಲ್ಲಿ ವಿವಿಧ ರಾಜ್ಯದ ಜನರ ಬಳಿ ತೆರಳಿ ಅವರ ಮನ್-ಕಿ-ಬಾತ್ ಆಲಿಸಿದ್ದೇನೆ. ಎಲ್ಲಿ ಹೋದರೂ ಜನರ ಉತ್ತರ ಒಂದೇ ಆಗಿದೆ. ನಮ್ಮ ಮನ್-ಕಿ-ಬಾತ್‌ನ್ನು ಯಾರು ಕೇಳುತ್ತಾರೆ? ಅದಕ್ಕೆ ಬೆಲೆ ಎಲ್ಲಿದೆ? ಏನಿದ್ದರೂ ನಾಯಕರ ಮತ್ತು ಪಕ್ಷದವರ ಮಾತನ್ನು ಕೇಳಿ, ನಂಬಿ ನಾವು ಬದುಕಬೇಕಾಗಿದೆ ಎಂದು ಹೇಳುತ್ತಾರೆ. ಖಾಸಗಿಯಾಗಿ ತಮ್ಮ ಕಷ್ಟಗಳ ಬಗ್ಗೆ, ತೊಂದರೆಗಳ ಬಗ್ಗೆ ತಮ್ಮ ಆಶಯಗಳ ಬಗ್ಗೆ ವಿವರವಾಗಿ ಮಾತನಾಡುತ್ತಾರೆ. ಆದರೆ ಮೈಕ್-ಕ್ಯಾಮರ ಹಿಡಿದ ಕೂಡಲೇ ಮನ ಬಿಚ್ಚಿ ಮಾತನಾಡಲು ಹೆದರುತ್ತಾರೆ. ಮನ್-ಕಿ-ಬಾತ್‌ನ್ನು ಹೇಳಿದರೆ ಎಲ್ಲಿ ಏನು ತೊಂದರೆಯಾಗುತ್ತದೆಯೋ ಎಂಬ ಆತಂಕ ಹೆಚ್ಚಿನವರಲ್ಲಿದೆ. ರಾಜರಾದ ಮತದಾರರಿಗೆ ತಮ್ಮ ಮನಸ್ಸಿನ ಭಾವನೆಗಳನ್ನು, ಆಶಯಗಳನ್ನು, ಆಡಳಿತದ ಕುಂದು ಕೊರತೆಗಳನ್ನು ಹೇಳಲು ಅಂಜಿಕೆ ಇದೆ ಎಂದಾದರೆ ಅದು ಪ್ರಜಾಪ್ರಭುತ್ವವೇ? ಗುಲಾಮಗಿರಿಯ ಆಡಳಿತವೇ? ನೀವೇ ತಿಳಿಸಿ. ನಮಗಾಗಿ, ನಮ್ಮಿಂದಲೇ ಆಡಳಿತ ಎಂದಾಗಿದ್ದರೆ ಜನಪ್ರತಿನಿಧಿ-ಜನಸೇವಕ, ಅಧಿಕಾರಿಗಳು- ಜನಸೇವಕರು ಎಂಬುವುದು ಹೌದಾಗಿದ್ದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜರಾದ ನಮಗೆ ಹೆದರಬೇಕೇ ಹೊರತು ನಾವು ಅವರಿಗೆ ಹೆದರಿ ಅವರಿಗೆ ಬೇಕಾದಂತೆ ಬದುಕುವ ಪರಿಸ್ಥಿತಿ ಬರಬಾರದಲ್ಲವೇ? ಜನರೇ ಉತ್ತರ ನೀಡಬೇಕು.

ಪ್ರಜಾಪ್ರಭುತ್ವದಲ್ಲಿ ನಮ್ಮ ಪ್ರತಿಯೊಬ್ಬನ ವೋಟು ಬಹಳ ಮುಖ್ಯ. ಆಯಾ ಕ್ಷೇತ್ರದ ಪ್ರತಿನಿಽ ಅಲ್ಲಿಯ ಜನರ ವೋಟಿನಿಂದಲೇ ಅವರ ಸೇವೆಗಾಗಿ ಆಯ್ಕೆಯಾಗುತ್ತಾರೆ. ನಮ್ಮ ಒಂದೊಂದು ವೋಟಿನಿಂದ ಅವರು ಗೆಲ್ಲಬಹುದು ಅಥವಾ ಸೋಲಬಹುದು. ಆದರೆ ಹೆಚ್ಚಿನ ಜನಪ್ರತಿನಿಽಗಳು ಗೆದ್ದ ಮೇಲೆ ತಮ್ಮ ರಾಜಕೀಯ ಪಕ್ಷದ ಮತ್ತು ನಾಯಕರ ಸೇವಕರಂತೆ ಕೆಲಸಮಾಡುತ್ತಾರೆ. ಅವರು ಆಯ್ಕೆ ಆದ ಮೇಲೆ ಪಕ್ಷ ಬೇಧ ಬಿಟ್ಟು ಕ್ಷೇತ್ರದ ಜನರ ಕೆಲಸ ಮಾಡಬೇಕು. ಮತದಾರರ ಭಾವನೆ ಮತ್ತು ಆಶಯಗಳನ್ನು ಅರಿತು ಸ್ಪಂಧಿಸಬೇಕು. ಕ್ಷೇತ್ರದ ಮತ್ತು ಜನರ ಸೇವೆಯೇ ದೊಡ್ಡ ದೇಶ ಸೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ಕಡೆಗಣಿಸಿದರೆ ಅದು ತಮ್ಮ ಕ್ಷೇತ್ರದ ಜನರಿಗೆ ಮಾಡುವ ದ್ರೋಹವೆಂದು ಆಯಾ ಕ್ಷೇತ್ರದ ಜನರು ಪರಿಗಣಿಸಬೇಕು. ಜನರ ಸೇವೆ ಮಾಡಲಿಕ್ಕಾಗಿ ಸಂಸದರಿಗೆ, ಶಾಸಕರಿಗೆ ತಿಂಗಳಿಗೆ ಲಕ್ಷಾಂತರ ರೂ. ಸಂಭಾವನೆ, ವಿವಿಧ ಸವಲತ್ತುಗಳು ಅಽಕಾರ ದೊರಕುತ್ತದೆ ಹಾಗೂ ನಿವೃತ್ತಿಯಾದರೂ ಜೀವಮಾನ ಪರ್ಯಂತ ಪಿಂಚಣಿ ದೊರಕುತ್ತದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು.
ಈ ವಿಷಯದಲ್ಲಿ ಸಾಮಾಜಿಕ ಬದಲಾವಣೆ ತರಲು ಮಹಾತ್ಮ ಗಾಂಧಿಯವರು ಹೇಳಿದ ನಿಜವಾದ ಸ್ವಾತಂತ್ರ್ಯವನ್ನು, ಗ್ರಾಮ ಸ್ವರಾಜ್ಯದ ಆಡಳಿತವನ್ನು ಆಚರಣೆಗೆ ತರುವಂತೆ ಮಾಡುವುದೇ ಸುದ್ದಿ ಜನಾಂದೋಲನದ ಮತದಾರರ ಜಾಗೃತಿಯ ಉದ್ದೇಶ. ಅದನ್ನು ನಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಚರಣೆಗೆ ತರುವಂತೆ ಮಾಡಲು ಜನರ ಬೆಂಬಲವನ್ನು ಕೇಳುತ್ತಿದ್ದೇನೆ. ಆಸಕ್ತರು ಸುದ್ದಿ ಜನಾಂದೋಲನದ ಮತದಾರರ ಜಾಗೃತಿಯ ಕಾರ‍್ಯಕ್ಕೆ ಕೈ ಜೋಡಿಸ ಬೇಕಾಗಿ ವಿನಂತಿಸುತ್ತಿದ್ದೇನೆ.

ಯಾರೇ ಆರಿಸಿ ಬಂದರೂ ಅವರು ಜನಸೇವಕರು, ಜನರೇ ರಾಜರು. ಜನರ ಮನ್-ಕಿ-ಬಾತ್‌ಗೆ ಬೆಲೆ ಬರುವಂತೆ ಮಾಡುವುದೇ ಸುದ್ದಿ ಜನಾಂದೋಲನದ ಉದ್ದೇಶ

LEAVE A REPLY

Please enter your comment!
Please enter your name here