9/11 ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಅಶೋಕ್ ರೈ – ಹತ್ತು ದಿನದೊಳಗೆ ಗ್ರಾಪಂ ನಲ್ಲೇ 9/11 ವ್ಯವಸ್ಥೆ: ಸರಕಾರದ ಭರವಸೆ

0

ಪುತ್ತೂರು: 9/11 ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ, ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಶಾಸಕ ಅಶೋಕ್ ರೈ ಯವರು ಜನ ಸಾಮಾನ್ಯರ ದ್ವನಿಯಾಗಿದ್ದಾರೆ.
ಕಳೆದ ಎರಡು ತಿಂಗಳಿಂದ 9/11 ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಗ್ರಾಪಂ ಮೂಲಕವೇ 9/11 ನೀಡಲಾಗುತ್ತಿತ್ತು. ಮನೆ ಕಟ್ಟುವವರು, ಸೈಟ್ ಗೆ ಲೋನ್ ಪಡೆಯುವಲ್ಲಿ 9/11 ಮಾಡಬೇಕಾಗಿದ್ದು ಕಡ್ಡಾಯವಾಗಿದೆ. ಗ್ರಾ ಪಂ ಮೂಲಕ ನಡೆಯುತ್ತಿದ್ದ ಈ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳ ಹಿಂದೆ ಹೈಕೋರ್ಟು ಆದೇಶದಂತೆ ಬದಲಾವಣೆ ಮಾಡಿದ್ದು 9/11 ಪಡೆಯಬೇಕಾದರೆ ಮುಡಾ ಮೂಲಕವೇ ಪಡೆಯಬೇಕಿತ್ತು. ಇದು ಜನ ಸಾಮಾನ್ಯರಿಗೆ ತೊಂದರೆಯುಂಟು ಮಾಡಿತ್ತು. ಗ್ರಾಮದ ವ್ಯಕ್ತಿಯೋರ್ವರಿಗೆ ಮನೆ ಮಟ್ಟಲು ತಮ್ಮ ಜಾಗಕ್ಕೆ 9/11 ಮಾಡಿಸಿಕೊಳ್ಳಬೇಕಾದರೆ ಮಂಗಳೂರು ಮುಡಾ ಕಚೇರಿಗೆ ಅರ್ಜಿ ಹಾಕಬೇಕಾಗಿತ್ತು‌ . ಈ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದ ಶಾಸಕರು 9/11 ವ್ಯವಸ್ಥೆಯನ್ನು ಹಿಂದೆ ಇದ್ದ ರೀತಿಯಲ್ಲೇ ಮುಂದುವರೆಸಬೇಕು. ಗ್ರಾಪಂ ಮೂಲಕವೇ ಇದರ ವ್ಯವಸ್ಥೆ ಆಗಬೇಕಿದೆ. ಈಗಿನ ವ್ಯವಸ್ಥೆಯು ಜನರಿಗೆ ತೊಂದರೆಯುಂಟು ಮಾಡಿದ್ದು ಬಡವರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಸರಕಾರಕ್ಕೆ ತಿಳಿಸಿದ್ದರು. ಈ ವಿಚಾರವಾಗಿ ಶಾಸಕರಿಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆಯವರು ಜೂನ್ ಕೊನೇ ವಾರದಲ್ಲಿ ಸಮಸ್ಯೆಗೆ ಮುಕ್ತಿ ನೀಡಿ ಹಿಂದಿನ ಮಾದರಿಯಲ್ಲೇ ಗ್ರಾಪಂ ಮೂಲಕವೇ 9/11 ವ್ಯವಸ್ಥೆ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಸಮಸ್ಯೆ ಗಂಭೀರವಾಗಿತ್ತು, ಏನೂ ಅರಿಯದ ಬಡ ಜನರು 9/11 ಗಾಗಿ ಕಷ್ಟಪಡುವಂತಾಗಿತ್ತು. ಮನೆ ಕಟ್ಟಬೇಕಾದಲ್ಲಿ ನರಕಯಾತನೆ ಅನುಭವಿಸಬೇಕಾಗಿತ್ತು. ಈ ಬಗ್ಗೆ ಅನೇಕರು ನನ್ನಲ್ಲಿ ನೋವು ಹೇಳಿಕೊಂಡಿದ್ದರು. ಸಚಿವರ ಜೊತೆ ಮಾತನಾಡಿದ್ದೇನೆ ಹತ್ತು ದಿನದೊಳಗೆ ಸಮಸ್ಯೆ ಇತ್ಯರ್ಥವಾಗಲಿದೆ.

ಅಶೋಕ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here