ಕ್ಯಾ. ಬ್ರಿಜೇಶ್ ಚೌಟ ಗೆಲುವು ಹಿನ್ನೆಲೆ-ಉಪ್ಪಿನಂಗಡಿಯಲ್ಲಿ ವಿಜಯೋತ್ಸವ ಮೆರವಣಿಗೆ

0

ಉಪ್ಪಿನಂಗಡಿ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆ ನಡೆಸಿದರು.


ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ಹೊರಟ ಮೆರವಣಿಗೆಯು ಉಪ್ಪಿನಂಗಡಿ ಬಸ್‌ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಹಣ್ಣುಗಳನ್ನು ವಿತರಿಸಿ ಸಂಭ್ರಮಿಸಲಾಯಿತು. ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಹಿಂದೂಪರ ಸಂಘಟನೆಗಳಾದ ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಭಾಗಹಿಸಿದ್ದರು.


ಪ್ರಮುಖರಾದ ಎನ್. ಉಮೇಶ್ ಶೆಣೈ, ಚಂದಪ್ಪ ಮೂಲ್ಯ, ರಾಮಚಂದ್ರ ಪೂಜಾರಿ ಕೋಡಿಂಬಾಡಿ, ಯತೀಶ್ ಶೆಟ್ಟಿ, ಸಂತೋಷ್ ಕುಮಾರ್ ಪಂರ್ದಾಜೆ, ಸುದರ್ಶನ್, ಚಿದಾನಂದ ಪಂಚೇರು, ಉಷಾಚಂದ್ರ ಮುಳಿಯ, ಶ್ಯಾಮಲಾ ಶೆಣೈ, ವಿದ್ಯಾಧರ ಜೈನ್, ಧನಂಜಯ ನಟ್ಟಿಬೈಲ್, ರವಿನಂದನ್, ಹರಿರಾಮಚಂದ್ರ, ಪ್ರಶಾಂತ್ ಪೆರಿಯಡ್ಕ, ಹರೀಶ್ ಪಟ್ಲ, ಪ್ರಭಾಕರ ಬಂಡಾರಿ, ಮಹೇಶ್ ಬಜತ್ತೂರು, ಆದೇಶ್ ಶೆಟ್ಟಿ, ಮಹೇಶ್ ಬಜತ್ತೂರು, ಲೋಕೇಶ್ ಬೆತ್ತೋಡಿ, ಪ್ರಸಾದ್ ಬಂಡಾರಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here