ಎಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ – ಸುದಾನ ಪಿ ಯು ಕಾಲೇಜಿನ ಸ್ವಸ್ತಿ ಶೆಟ್ಟಿಗೆ 7ನೇ ರ‍್ಯಾಂಕ್‌

0

ಪುತ್ತೂರು: 2023-24ರ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸುದಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು|ಸ್ವಸ್ತಿ ಶೆಟ್ಟಿರವರು ರಾಜ್ಯದಲ್ಲಿ ಏಳನೇ ರ‍್ಯಾಂಕ್‌ ಗಳಿಸಿಕೊಂಡಿದ್ದಾರೆ.

ಸ್ವಸ್ತಿ ಶೆಟ್ಟಿರವರು ಇಂಗ್ಲಿಷ್ ನಲ್ಲಿ 125 ಅಂಕ, ಕನ್ನಡ 99, ಹಿಂದಿ 99, ಗಣಿತ 98, ವಿಜ್ಞಾನ 99, ಸಮಾಜ ವಿಜ್ಞಾನ 99 ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಇವರು ಪುರುಷೋತ್ತಮ ಶೆಟ್ಟಿ ಹಾಗೂ ಪೂನಂ ಶೆಟ್ಟಿರವರ ಪುತ್ರಿ ಎಂದು ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here