ಕೆಲೆಂಬಿರಿ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

0

ಕಾಣಿಯೂರು: ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.ಮಾವು, ರಂಬೂಟನ್, ಸುರಗಿ, ಜಾರಿಗೆ, ಸಿತಾಫಲ, ಅಶ್ವತ, ಜಂಬೂನೇರಳೆ, ಶಿವಣಿ, ಹೊಳೆದಾಸವಾಳ, ಬೇಂಗ, ಹಲಸು,ಬೇವು ಬಿಲ್ವಪತ್ರೆ ಮುಂತಾದ ಗಿಡಗಳನ್ನು ಕೆಲಂಬೀರಿ, ಬೆಳಂದೂರು, ಬರೆಪ್ಪಾಡಿ ಪರಿಸರದಲ್ಲಿ ನೆಟ್ಟು ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ರತನ್ ರೈ ಕಾರ್ಲಾಡಿ ಮತ್ತು ಸದಸ್ಯರುಗಳು ಈ ಕಾರ್ಯದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here