ಪುತ್ತೂರು: ಸವಣೂರಿನ ವಿದ್ಯಾರಶ್ಮಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಇಂದು ನಾವು ಪ್ರಾಪಂಚಿಕ ಹವಾಮಾನದ ವಿದ್ಯಮಾನಗಳನ್ನು ಗಮನಿಸಬೇಕು. ಹಸಿರೇ ಇಲ್ಲದ ಊರಿನಲ್ಲಿ ಧಾರಾಕಾರ ಮಳೆ ಸುರಿದರೆ ಹಸಿರು ಇರುವಲ್ಲಿ ಮಳೆಯೇ ಇಲ್ಲದಂತಾಗಿದೆ. ಯಾಕೆ ಹೀಗೆ ಆಗುತ್ತಿದೆ ಎಂಬುದಕ್ಕೆ ಕಾರಣ ಹುಡುಕಿದರೆ ಅದು ಪರಿಸರದ ಅಸಮತೋಲನವಾಗಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಮಗಿರುವ ಸುಲಭ ಮತ್ತು ಪರಿಣಾಮಕಾರಿ ಉಪಾಯ ಎಂದರೆ ಗಿಡ ನೆಡುವುದು ಮತ್ತು ಮರಗಳನ್ನು ಬೆಳೆಸುವುದಾಗಿದೆ ಎಂದರು.
ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ಉಪ ಪ್ರಾಂಶುಪಾಲರುಗಳಾದ ಶೇಷಗಿರಿ ಎಂ. ಮತ್ತು ಶಶಿಕಲಾ ಎಸ್. ಆಳ್ವ, ರಾ.ಸೇ. ಯೋಜನಾಧಿಕಾರಿ ನಿರಂಜನ್, ಪೋಷಕರು, ಸಿಬ್ಬಂದಿ ವರ್ಗ ಮತ್ತು ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತಿಯ ಬಿ.ಕಾಂ.ನ ಪಲ್ಲವಿ ಎಸ್. ಮತ್ತು ಪ್ರೀತಿ ಶೆಟ್ಟಿ ಸ್ವಾಗತ ಮತ್ತು ವಂದನಾರ್ಪಣೆಗಳಲ್ಲಿ ಸಹಕರಿಸಿದರು. ತೃತೀಯ ಬಿ.ಎ. ತರಗತಿಯ ಪ್ರವೀಣ್ ಕಾರ್ಯಕ್ರಮವನ್ನು ನಿರೂಪಿಸಿದರು.