ಚೇತನಾ ಆಸ್ಪತ್ರೆಯಲ್ಲಿ ಉಚಿತ ಫೈಬ್ರೋಸ್ಕ್ಯಾನ್, ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆ

0

ಪುತ್ತೂರು:ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಜೂ.5 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ  ಫೈಬ್ರೋಸ್ಕ್ಯಾನ್ ಹಾಗೂ ಲಿವರ್ ಫಂಕ್ಷನ್ ಟೆಸ್ಟ್  ತಪಾಸಣೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಈ ಪರೀಕ್ಷೆಯು ಉಚಿತವಾಗಿದ್ದು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಸದಸ್ಯರಾದ ಅರಿಯಡ್ಕ  , ಸುರೇಶ್ ಶೆಟ್ಟಿ, ಲೋವಲ್ ಮೇವಡ, ಎಂ.ಜಿ ರೈ, ಆಸ್ಪತ್ರೆ ಮ್ಯಾನೇಜರ್ ನೋಯೆಲ್ ಡಿ’ಸೋಜರವರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here