ಬಿಳಿನೆಲೆ ಬೈಲು ಹಿ.ಪ್ರಾ.ಶಾಲೆಯಲ್ಲಿ ಪರಿಸರ ದಿನಾಚರಣೆ

0

ಕಡಬ: ಬಿಳಿನೆಲೆ ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಮುಖ್ಯ ಗುರುಗಳಾದ ಶಾರದಾ ಜಿ ಎಂ ರವರು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಕರಾದ ಲೋಹಿತ್ ಕೆ ರವರು ಪರಿಸರ ದಿನದ ಕುರಿತು ಮಾಹಿತಿಯನ್ನು ನೀಡಿದರು . ಶಿಕ್ಷಕರಾದ ಸುನಂದಾ, ದಮಯಂತಿ, ಕ್ಷಮಾ ಮತ್ತು ಗೌರವ ಶಿಕ್ಷಕಿ ಪವಿತ್ರಾ ರವರು ಗಿಡಗಳನ್ನು ನೆಡುವ ಮತ್ತು ಶಾಲಾ ಕೈತೋಟದ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬಳಿಕ ವಿದ್ಯಾರ್ಥಿಗಳು ಮನೆಗಳಿಂದ ತಂದಿದ್ದ ಹಲವು ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.

LEAVE A REPLY

Please enter your comment!
Please enter your name here