ಪುತ್ತೂರು: ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2024ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿ ಯುಕ್ತಾ. ವಿ.ಜಿ. 720ಕ್ಕೆ 651 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 28266ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 604ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ರಾಮಕುಂಜದ ವಿಜಯ ವಿಕ್ರಮ ಜಿ ಹಾಗೂ ಸುನಿತಾ. ಎಮ್ ಕೆ ದಂಪತಿ ಪುತ್ರಿ. ಇಂದುಶ್ರೀ 720ಕ್ಕೆ 563 ಅಂಕಗಳನ್ನು ಗಳಿಸಿರುತ್ತಾರೆ. ಇವರು ಕೆದಿಲದ ಕೆ. ವೆಂಕಟಕೃ಼ಷ್ಣ ಹಾಗೂ ಸುಜಾತ ಇವರ ಪುತ್ರಿ. ವಿನಾಯಕ.ಜೆ 720ಕ್ಕೆ 559 (ಮೈಸೂರಿನ ಜಗದೀಶ .ಎಚ್.ಪಿ ಹಾಗೂ ಮಹೇಶ್ವರಿ ಇವರ ಪುತ್ರ), ಶ್ರೇಯಾ .ಕೆ. ಇವರು 720ಕ್ಕೆ 557(ಮಂಚಿಯ ಪುಷ್ಪರಾಜ್.ಕೆ. ಹಾಗೂ ಶಾರದಾ ದಂಪತಿಗಳ ಪುತ್ರಿ), ರಿಯಾ ರಾಮ್ 534 (ಪುತ್ತೂರಿನ ರಾಮ .ಕೆ. ಹಾಗೂ ಪ್ರಭಾವತಿ .ಕೆ. ದಂಪತಿಗಳ ಪುತ್ರಿ) , ಅನುಷ್ಕಾ ರಾವ್ ದೇವ 522 (ಸುಳ್ಯ ತಾಲೂಕಿನ ರಾಜಶೇಖರ್.ಕೆ. ಹಾಗೂ ವೀಣಾ ರಾವ್ ದೇವ ದಂಪತಿಗಳ ಪುತ್ರಿ), ಶಮಂತ್‌ಕುಮಾರ್.ಕೆ. 516 (ಸುಳ್ಯ ತಾಲೂಕಿನ ಚಂದ್ರಶೇಖರ ಉಪಾಧ್ಯಾಯ ಹಾಗೂ ವೀಣಾ.ಕೆ. ಇವರ ಪುತ್ರ), ಹರ್ಷಾ.ಎಸ್. (ಅಡ್ಯನಡ್ಕದ ಶ್ರೀಕೃಷ್ಣ ಭಟ್ ಎಸ್ ಹಾಗೂ ಜಯಶ್ರೀ ಕೆ.ಆರ್ ದಂಪತಿ ಪುತ್ರಿ) 512ಅಂಕಗಳನ್ನು ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.