ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ

0

ಗೌರವಾಧ್ಯಕ್ಷ: ಮನಮೋಹನ ರೈ, ಅಧ್ಯಕ್ಷ: ಉಮೇಶ್ ಮಿತ್ತಡ್ಕ, ಕಾರ್ಯದರ್ಶಿ: ಜಯರಾಮ ರೈ ಮೂರ್ಕಾಜೆ ಕೋಶಾಧಿಕಾರಿ ವಿಶಾಖ್‌ರಾಜ್ ಇರ್ದೆ ಆಯ್ಕೆ

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಸೆ. 7,8 ರಂದು ನಡೆಯಲಿರುವ 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರ ಅಧ್ಯಕ್ಷತೆಯಲ್ಲಿ ಬೆಟ್ಟಂಪಾಡಿ ದೇವಾಲಯದ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ಉದ್ಯಮಿ ಮನಮೋಹನ ರೈ ಚೆಲ್ಯಡ್ಕ, ಅಧ್ಯಕ್ಷರಾಗಿ ಸುದ್ದಿಬಿಡುಗಡೆಯ ಉಮೇಶ್ ಮಿತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕ್ಯಾಂಪ್ಕೋ ಉದ್ಯೋಗಿ ಜಯರಾಮ ರೈ ಮೂರ್ಕಾಜೆ, ಕೋಶಾಧಿಕಾರಿಯಾಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ವಿಶಾಖ್‌ರಾಜ್ ಇರ್ದೆಯವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸಂಚಾಲಕ ಡಾ. ಸುಬ್ರಹ್ಮಣ್ಯ ವಾಗ್ಲೆ, ನಿಕಟಪೂರ್ವ ಸಮಿತಿಯ ಅಧ್ಯಕ್ಷ ಪ್ರಭಾಕರ ರೈ ಬಾಜುವಳ್ಳಿ, ಪ್ರಧಾನ ಕಾರ್ಯದರ್ಶಿ ಧನಂಜಯ ಬೆಟ್ಟಂಪಾಡಿ, ಕೋಶಾಧಿಕಾರಿ ರಂಜಿತ್ ತಲೆಪ್ಪಾಡಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here