ಪುತ್ತೂರು: ವಿಶ್ವ ಪರಿಸರ ದಿನಾಚರಣೆ ಅಂಗಾಗಿ ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಸಂರಕ್ಷಣೆಯಲ್ಲಿ ನೀರು ಇಂಗಿಸುವಿಕೆಯ ಪಾಲು ಹಾಗೂ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿತೆ ನಡೆಯಿತು. ಅರಿವು ಕೃಷಿ ಕೇಂದ್ರದ ಮಳೆ ಕೊಯ್ಲು ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಪ್ಪ ಗೌಡರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಯಲ್ಲಿ ನೀರು ಇಂಗಿಸುವಿಕೆಯ ಪಾಲು ಇದರ ಮಾಹಿತಿ ನೀಡಿ ಮಳೆಗಾಲದಲ್ಲಿ ಮಳೆನೀರು ಕೊಯ್ಲು ಉಪಯೋಗಿಸಿ ಮುಂದಿನ ಪೀಳಿಗೆಗೆ ಕೊಡಬಹುದಾದ ಅರಿವಿನ ಬಗ್ಗೆ ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಶ್ರೀರಾಮಕುಮಾರ್ ಮಳೆ ನೀರನ್ನು ಇಂಗಿಸುವ ಉದ್ದೇಶ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಶಾಲಾ ಮುಖ್ಯಗುರು ವಿದ್ಯಾಲಕ್ಷ್ಮಿ ನಾಯಕ್ ನೀರು ಇಂಗಿಸುವಲ್ಲಿ ಮಕ್ಕಳ ಪಾತ್ರವನ್ನು ತಿಳಿಸಿದರು. ವಿಶ್ವ ಪರಿಸರ ದಿನದ ಮಹತ್ವವನ್ನು ತಿಳಿಸಿದರು.
ರೈನಿ ಕಂಪೆನಿಯ ಡೆಮೊ ಗಾಡಿಯಿಂದ ಮಳೆನೀರು ಕೊಯ್ಲು ಪ್ರಾತ್ಯಕ್ಷಿತೆ ತೋರಿಸಲಾಯಿತು. ವಿಶ್ವ ಪರಿಸರ ದಿನದ ಆಚರಣೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ತಯಾರಿಸಿದಂತಹ ಸೀಡ್ ಬಾಲ್ ಮತ್ತು ಕೋಕೆದಾಮವನ್ನು ಪ್ರದರ್ಶಿಸಲಾಯಿತು. ಶಾಲೆಯ ಮಕ್ಕಳು ಹಾಗು ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಅರಿವು ಕೃಷಿ ಕೇಂದ್ರದ ಚೈತ್ರಾ ಮಧುಚಂದ್ರ ಎಲಿಯ, ಕುಶಾಲಪ್ಪ ಗೌಡ, ದಿನೇಶ್ ಕುಲಾಲ್ ಸಹಕರಿಸಿದರು. ಹತ್ತನೇ ತರಗತಿಯ ಮಧುಶ್ರೀ ಮತ್ತು ಅದಿಶ್ ಕಾರ್ಯಕ್ರಮ ನಿರೂಪಿಸಿದರು. ಎಂಟನೇ ತರಗತಿಯ ಮನಸ್ವಿ, ಶ್ರೇಯ ಸ್ವಾಗತಿಸಿ ದೀಪಿಕಾ ವಂದಿಸಿದರು.