ಬಿ.ಎಡ್ ಪರೀಕ್ಷಾ ಫಲಿತಾಂಶ: ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ ರ‍್ಯಾಂಕ್‌

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ 2023ನೇ ಸಾಲಿನ ಬಿ.ಎಡ್ ಪರೀಕ್ಷಾ ಫಲಿತಾಂಶ ಘೋಷಣೆಯಾಗಿದ್ದು,ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಶಿಕ್ಷಕಿಯಾದ ಶ್ರೀದೇವಿ ಕೆ ಹೆಗ್ಡೆ ಅವರು (90.38%)ದೊಂದಿಗೆ ಪ್ರಥಮ ರ‍್ಯಾಂಕ್‌ನ್ನು ಪಡೆದಿರುತ್ತಾರೆ.ಇವರು ಶ್ರೀನಿವಾಸ್ ಕೆ ಹೆಗ್ಡೆ ಮತ್ತು ಶೋಭಾಶ್ರೀನಿವಾಸ್ ಹೆಗ್ಡೆ ಪರ್ಲಡ್ಕ ಇವರ ಪುತ್ರಿಯಾಗಿರುತ್ತಾರೆ.

ಅದೇ ರೀತಿ ಮಂಗಳೂರು ವಿಶ್ವವಿದ್ಯಾನಿಲಯದ 2024ನೇ ಸಾಲಿನ ಬಿ.ಎಡ್ ಪರೀಕ್ಷಾ ಫಲಿತಾಂಶ ಘೋಷಣೆಯಾಗಿದ್ದು,ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಶಿಕ್ಷಕ ಹರ್ಷಿತ್ ಕುಮಾರ್ (89%) ದೊಂದಿಗೆ ದ್ವಿತೀಯ ರ‍್ಯಾಂಕ್ ಪಡೆದಿರುತ್ತಾರೆ. ಇವರು ಸಂಜೀವ ಪೂಜಾರಿ ಕೆ ಮತ್ತು ಸರಸ್ವತಿ, ಕೂರೇಲು ಮನೆ, ಆರ್ಯಾಪು ಇವರ ಪುತ್ರ.

LEAVE A REPLY

Please enter your comment!
Please enter your name here