ಜೂ.9; ನರೇಂದ್ರ ಮೋದಿ ಪ್ರಮಾಣವಚನ- ಬೆಟ್ಟಂಪಾಡಿ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ಕಾಲ್ನಡಿಗೆ ಜಾಥಾ- ನೇರ ಪ್ರಸಾರ ವೀಕ್ಷಣೆ

0

ನಿಡ್ಪಳ್ಳಿ; ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಜೂ.9 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಬಿ. ಜೆ. ಪಿ ಶಕ್ತಿ ಕೇಂದ್ರದ ವತಿಯಿಂದ ಇರ್ದೆ ಸರ್ಕಲ್ ಬಳಿಯಿಂದ ಕಾಲ್ನಡಿಗೆ ಜಾಥಾ ಸಂಜೆ 4 ಗಂಟೆಗೆ ಹೊರಡಲಿದೆ. ಮೆರವಣಿಗೆ ಮೂಲಕ ಜಾಥಾ ಹೊರಟು ಸಾಗಿ ಬಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸೇರಿ ವಿಜಯೋತ್ಸವ ಆಚರಿಸುವುದು. ನಂತರ ಪ್ರಮಾಣ ವಚನದ ನೇರ ಪ್ರಸಾರ ವೀಕ್ಷಣೆ ಮತ್ತು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here