ಮಂಗಳೂರು ವಿವಿ: ಸೌಜನ್ಯಗೆ ಪ್ರಥಮ ರ‍್ಯಾಂಕ್

0

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಕುಮಾರಿ ಸೌಜನ್ಯ ಬಿ.ಎಂ. ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ‍್ಯಾಂಕ್ ಲಭಿಸಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಕುಮಾರಿ ಸೌಜನ್ಯ ಬಿ.ಎಂ. ಈ ಸಾಧನೆ ಮಾಡಿದ್ದಾರೆ.

ಕಾಲೇಜಿನ ಸ್ನಾತಕೋತ್ತರ ವಿಭಾಗದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಲೇಜಿಗೆ ಪ್ರಥಮ ರ‍್ಯಾಂಕ್ ಲಭಿಸಿರುತ್ತದೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಬಾಬು ಬಿ. ಮತ್ತು ಶ್ರೀಮತಿ ಸುಂದರಿ ಬಿ.ಎಂ. ದಂಪತಿಯ ಪುತ್ರಿಯಾಗಿರುವ ಸೌಜನ್ಯ ಬಿ.ಎಂ. ಇವರು ಅತ್ಯಂತ ಬಡ ಕುಟುಂಬದಿಂದ ಬಂದಿದ್ದು, ಪಠ್ಯ , ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಕೂಡ ಅನನ್ಯವಾದಂತಹ ಸಾಧನೆಯನ್ನು ಮಾಡಿದ್ದಾರೆ. ಕಾಲೇಜಿನಲ್ಲಿ ದೊರಕಿದ ಪ್ರೋತ್ಸಾಹ, ಹೆತ್ತವರ ಸಹಕಾರ ನನ್ನ ಈ ಸಾಧನೆಗೆ ಪ್ರಧಾನ ಕಾರಣವೆಂದಿರುವ ಸೌಜನ್ಯರವರು ಬಿಎಡ್ ಶಿಕ್ಷಣಕ್ಕಾಗಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸೇರ್ಪಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here