ವೀರಮಂಗಲ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ-ಕೃಷಿ ತೋಟಗಳಿಗೆ ಹಾನಿ

0

ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೀರಮಂಗಲ ಪರಿಸರದಲ್ಲಿ ಜೂ.9ರಂದು ಕಾಡಾನೆ ಕಾಣಿಸಿಕೊಂಡಿದ್ದು ಸ್ಥಳೀಯ ಕೃಷಿ ತೋಟಗಳಿಗೆ ಹಾನಿ ಮಾಡಿದೆ. ಕಾಡಾನೆ ಬಂದಿರುವ ವಿಚಾರ ಕೇಳಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ವೀರಮಂಗಲ ಡೆಬ್ಬೆಲಿ ಅನಂತ ಕೃಷ್ಣ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ ಆನೆ ಬಾಳೆ ಗಿಡಗಳನ್ನು ಹಾನಿ ಮಾಡಿದೆ. ರಾಧಾಕೃಷ್ಣ ಪಲ್ಲತ್ತೋಡಿ, ಇಬ್ರಾಹಿಂ ಪಲ್ಲತ್ತೋಡಿ ಹಾಗೂ ಸುಲೈಮಾನ್ ಪಲ್ಲತ್ತೋಡಿ ಎಂಬವರ ತೋಟಗಳಿಗೂ ಆನೆ ದಾಳಿ ನಡೆಸಿದ್ದು ಬಾಳೆ ಗಿಡಗಳನ್ನು ಹಾನಿಗೊಳಿಸಿದೆ ಎಂದು ತಿಳಿದು ಬಂದಿದೆ.
ಕಾಡಾನೆಯನ್ನು ವೀರಮಂಗಲ ಆನಾಜೆಯಲ್ಲಿ ರಬ್ಬರ್ ಟಾಪಿಂಗ್ ಮಾಡುವವರು ನೋಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ. ಸರ್ವೆ-ಇಡ್ಯಾಡಿ ಮೂಲಕ ಆನೆ ವೀರಮಂಗಲಕ್ಕೆ ಬಂದಿರಬಹುದು ಎಂದು ಸಂಶಯಿಸಲಾಗಿದೆ.

LEAVE A REPLY

Please enter your comment!
Please enter your name here