ಪಾಣಾಜೆ : ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವ ಗುಡಿ ಅನುಜ್ಞಾಕಲಶ

0

ಪಾಣಾಜೆ : ಇಲ್ಲಿನ ಕಿನ್ನಿಮಾಣಿ – ಪೂಮಾಣಿ , ಪಿಲಿಭೂತ ದೈವಸ್ಥಾನ ಶಿಲಾನ್ಯಾಸಗೊಂಡು ನೂತನ ದೈವಸ್ಥಾನದ ಕೆಲಸಕಾರ್ಯಗಳು‌ ನಡೆಯುತ್ತಿದ್ದು , ದೈವಸ್ಥಾನದ ವಠಾರದಲ್ಲಿ ಇರುವ ಪೂಮಾಣಿ ದೈವ ಹಾಗೂ ಪಿಲಿಭೂತ ದೈವಗಳ 2 ಗುಡಿಯನ್ನು ನೂತನವಾಗಿ‌ ನಿರ್ಮಿಸುವ ಸಲುವಾಗಿ ಜೂ. 10 ರಂದು ಬೆಳಗ್ಗೆ ಅನುಜ್ಞಾ ಕಲಶ ನಡೆಯಿತು.


ಕುಂಟಾರು ಬ್ರಹ್ಮಶ್ರೀ ಶ್ರೀಧರ ತಂತ್ರಿಗಳ‌ ನೇತೃತ್ವದಲ್ಲಿ ಬಾಲಾಲಯದಲ್ಲಿ ಪ್ರತಿಷ್ಠೆಗೊಂಡಿರುವ ದೈವಗಳಲ್ಲಿ ಗುಡಿಗಳ ಜೀರ್ಣೋದ್ಧಾರ ಮಾಡುವ ಬಗ್ಗೆ ಪ್ರಾರ್ಥನೆಯನ್ನು ಮಾಡಿ, ನಂತರ 2 ಗುಡಿಗಳಿಗೆ ತೆರಳಿ ಅಲ್ಲಿ ಅನುಜ್ಞಾಕಲಶ ಮಾಡಿ, ಪೂಜೆಯನ್ನು‌ ನೇರವೇರಿಸಿ ಅಲ್ಲಿದ್ದ ಪೀಠೋಪಕರಣಗಳನ್ನು‌ ಗುಡಿಯ ಒಳಗಿಂದ ತೆರವುಗೊಳಿಸಿ ತಂತ್ರಿಯವರು ಸಾಂಕೇತಿಕವಾಗಿ 2 ಗುಡಿಯ ಮಾಡಿನ ಒಂದು ಹಂಚನ್ನು ತೆಗದು ಹಾಕುವುದರೊಂದಿಗೆ ಗುಡಿಗಳ ಜೀರ್ಣೋದ್ಧಾರ ಕೆಲಸಕಾರ್ಯಗಳಿಗೆ ಚಾಲನೆ ನೀಡಲಾಯಿತು.

ನಂತರ ಸೇರಿದ ಭಕ್ತಾದಿಗಳಿಗೆ ಬಾಲಾಲಯದಲ್ಲಿ ದೈವಗಳ ಅರಶಿನಹುಡಿ ಪ್ರಸಾದವನ್ನು ನೀಡಲಾಯಿತು. ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ರಣಮಂಗಲ ದೇವಸ್ಥಾನದ ಅರ್ಚಕರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here