ಪುತ್ತೂರು:ಒಂದಲ್ಲ ಎರಡು ಆನೆಗಳು ಪ್ರತ್ಯಕ್ಷ- ಅರಣ್ಯ ಇಲಾಖೆಯಿಂದ ಕಾರ್ಯಚರಣೆ

0

ಪುತ್ತೂರು: ಕಾಸರಗೋಡಿನ ಪರಪ್ಪೆ ಅಭಯಾರಣ್ಯದಿಂದ ದಾರಿ ತಪ್ಪಿ ಬಂದಿದೆ ಎನ್ನಲಾದ ಒಂಟಿ ಸಲಗವೊಂದು ಸುಳ್ಯ, ಪುತ್ತೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಕೆಲ ದಿನಗಳಿಂದ ವರದಿಯಾಗಿತ್ತು. ಆದರೆ ಈಗ ಒಂಟಿ ಆನೆ ಅಲ್ಲ ಎರಡು ಆನೆಗಳು ಪ್ರತ್ಯಕ್ಷವಾಗಿದೆ.

ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾಡಾನೆಯು ಬಳಿಕ ನಾಪತ್ತೆಯಾಗಿತ್ತು.ಗ್ರಾಮದಲ್ಲಿ ರಾತ್ರಿ ಹೊತ್ತು ಘೀಳಿಡುತ್ತಾ ಜನರಿಗೆ ಭಯ ಹುಟ್ಟಿಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಅಲ್ಲಿಂದ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಾಡಾನೆಗಳು ಎಲ್ಲಿ ಹೋಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ. ಅದಾದ ಬಳಿಕ ಕೆಲವು ತಿಂಗಳು ಕಳೆದ ನಂತರ ಆನೆ ಸವಣೂರು ಗ್ರಾಮದ ಕುಮಾರಮಂಗಲ, ಪುಣ್ಚಪ್ಪಾಡಿ ಪ್ರದೇಶದಲ್ಲಿ ಸಡನ್ನಾಗಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿತ್ತು. ಕೊಳ್ತಿಗೆ ಗ್ರಾಮದಿಂದ ಸವಣೂರು ಗ್ರಾಮಕ್ಕೆ ಹೆಜ್ಜೆ ಹಾಕಿದ ಆನೆ ಒಂದು ರಾತ್ರಿಯನ್ನು ಸವಣೂರು ಗ್ರಾಮದಲ್ಲಿ ಕಳೆದಿದೆ.


ಗ್ರಾಮದಿಂದ ಗ್ರಾಮಕ್ಕೆ ಗಜರಾಜನ ನಡಿಗೆ
ಜೂ.5 ರಂದು ಸವಣೂರು ಗ್ರಾಮದಿಂದ ರಾತ್ರೋ ರಾತ್ರಿ ಆನೆ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕಾಣಿಸಿಕೊಂಡಿತು. ಅಲ್ಲಿಯೂ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿ ಹಗಲು ಹೊತ್ತು ಮಲಗಿದ್ದ ಆನೆಯನ್ನು ಅರಣ್ಯ ಇಲಾಖೆಯವರು ರಾತ್ರೋ ರಾತ್ರಿ ಹರಸಾಹಸಪಟ್ಟು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಿದ್ದರು. ಹೀಗೆ ಹೋದ ಒಂಟಿಸಲಗ ಮತ್ತೆ ಸವಣೂರು ಗ್ರಾಮದ ಪುಣ್ಚಪ್ಪಾಡಿಗೆ ತೆರಳಿತ್ತು. ಆಹಾರಕ್ಕಾಗಿ ಅಲ್ಲಿನ ಒಂದಿಬ್ಬರು ಕೃಷಿಯನ್ನು ನಾಶ ಮಾಡಿತ್ತು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಕಾಲಿಟ್ಟ ಗಜರಾಜ ಅಲ್ಲಿಯೂ ಒಂದು ರಾತ್ರಿ ಕಳೆದಿತ್ತು. ಅಲ್ಲಿಂದ ಪ್ರಯಾಣ ಬೆಳೆಸಿದ ಆನೆ ಜೂ.10 ಕ್ಕೆ ಶಾಂತಿಗೋಡು ಗ್ರಾಮಕ್ಕೆ ತಲುಪಿದೆ. ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೆ ಬಂದಿರುವ ಆನೆ ಒಂದು ರಾತ್ರಿ ಅಲ್ಲಿ ಕಳೆದಿದೆ. ಅಲ್ಲಿಂದ ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ.ಆ ನಂತರದ ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ಒಂದಲ್ಲ ಏರಡು ಆನೆಗಳು ಕಂಡು ಬಂದಿದ್ದು ಅರಣ್ಯ ಇಲಾಖೆಗೆ ಅಚ್ಚರಿ ಮೂಡಿಸಿದೆ.ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.


LEAVE A REPLY

Please enter your comment!
Please enter your name here