ಮುಖ್ಯಮಂತ್ರಿಯಾಗಿ ಧೃತಿ.ಆರ್.ರೈ ಮತ್ತು ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ಮುರ್ಶಿದ್
ಬಡಗನ್ನೂರುಃ ಕೊಯಿಲ ಬಡಗನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶಾಲಾ ಸಂಸತ್ ಅಂದರೆ ಶಾಲಾ ಮಂತ್ರಿಮಂಡಲವನ್ನು ಚುನಾವಣೆ ಮೂಲಕ ಆರಿಸಲಾಯಿತು.ಮೊಬೈಲ್ ಇವಿಎಮ್ ಮೂಲಕ ವಿದ್ಯಾರ್ಥಿಗಳು ಮತಚಲಾಯಿಸಿದರು. ಕೊನೆಯಲ್ಲಿ ಫಲಿತಾಂಶ ಘೋಷಣೆಯ ಮೂಲಕ ಶಾಲಾ ನಾಯಕಿ ಹಾಗೂ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.
ಮುಖ್ಯಮಂತ್ರಿಯಾಗಿ 7 ನೇ ತರಗತಿಯ ಧೃತಿ.ಆರ್.ರೈ ಮತ್ತು ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ಮುರ್ಶಿದ್ 7 ನೇ ತರಗತಿ ಆಯ್ಕೆಯಾಗಿದ್ದಾರೆ,ಶಿಕ್ಷಣ ಮಂತ್ರಿಯಾಗಿ ಆರಾಧ್ಯ ಪಿ,ಹಣಕಾಸು ಮಂತ್ರಿಯಾಗಿ ಧೃತಿ. ಆರ್.ರೈ ,ಆಹಾರ ಮತ್ತು ಆರೋಗ್ಯಮಂತ್ರಿಯಾಗಿ ರಕ್ಷಿತ್ ಮತ್ತು ಕೆ.ಎಸ್.ಫಾತಿಮಾ ನಾಫಿಯ,ಕ್ರೀಡಾ ಮಂತ್ರಿಯಾಗಿ ಅಹಮದ್ ಸಜದ್ ಮತ್ತು ಫಾತಿಮ ಸುಹಾನ,ರಕ್ಷಣಾ ಮಂತ್ರಿಯಾಗಿ ದಿವಿತ್ ರೈ ಮತ್ತು ತೇಜಸ್, ನೀರಾವರಿ ಮಂತ್ರಿಯಾಗಿ ಮುಹಮ್ಮದ್ ಅನಸ್ ಮತ್ತು ಸೃಜನ್, ವಾರ್ತಾ ಮಂತ್ರಿಯಾಗಿ ಫಾತಿಮಾ ಸುಹಾನ ಮತ್ತು ಹರ್ಷಿತ್, ಸ್ವಚ್ಛತಾ ಮಂತ್ರಿಯಾಗಿ ಪವನ್ ಮತ್ತು ಮಹಮ್ಮದ್ ಮುರ್ಶಿದ್, ಕಾನೂನು ಮಂತ್ರಿಯಾಗಿ ದಕ್ಷ ಜೆ ರೈ, ಗ್ರಂಥಾಲಯ ಮಂತ್ರಿಯಾಗಿ ಆರಾಧ್ಯ ಪಿ, ತೋಟಗಾರಿಕಾ ಮಂತ್ರಿಯಾಗಿ ಉದಿತ್ ಮತ್ತು ಪುನೀತ್, ವಿರೋಧ ಪಕ್ಷದ ನಾಯಕನಾಗಿ ಮುಹಮ್ಮದ್ ಮುರ್ಶಿದ್, ಅಭಿವೃದ್ಧಿ ಮಂತ್ರಿಯಾಗಿ ಧೃತಿ ಆರ್ ರೈ, ಆಯ್ಕೆ ಮಾಡಲಾಯಿತು. ಆಯ್ಕೆಯಾದ ಮಂತ್ರಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ಪ್ರಮಾಣ ವಚನ ಬೋಧಿಸಿದರು.ಪದವೀಧರ ಶಿಕ್ಷಕಿ ಸೌಮ್ಯ ಬಿ ಚುನಾವಣಾ ಮಹತ್ವ ಹಾಗೂ ಗೌಪ್ಯತೆ ಬಗ್ಗೆ ತಿಳಿಸಿದರು.ಶಿಕ್ಷಕರಾದ ಗಿರೀಶ್ ಡಿ ಹಾಗೂ ಅತಿಥಿ ಶಿಕ್ಷಕಿ ಸರಳಾ ಡಿ ಸಹಕರಿಸಿದರು.