ಸುಬ್ರಹ್ಮಣ್ಯ: ಹೆದ್ದಾರಿಯಲ್ಲಿ ಕಾಡಾನೆ,ಆತಂಕ

0

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಇಂಜಾಡಿ ಮಹಾಮಾಯ ರೆಡಿಸೆನ್ಸಿ ಎದುರು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಕಾಡಾನೆ ಸಂಚರಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
ಜೂ.11ರಂದು ರಾತ್ರಿ 7.30ರ ಸುಮಾರಿಗೆ ಸಾರ್ವಜನಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸುಬ್ರಮಣ್ಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಪಟಾಕಿ ಬಿಸಾಡಿ ಆನೆಯನ್ನು ಕಾಡಿನೊಳಗೆ ಕಳಿಸುವ ಪ್ರಯತ್ನ ಮಾಡುತ್ತಿದ್ದಾರೆ.


ಸ್ಥಳಕ್ಕೆ ಆಗಮಿಸಿದ  ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು, ಹಾಗೂ ಉಪ ವಲಯ ಅರಣ್ಯ ಅಧಿಕಾರಿ  ಮನೋಜ್, ಅರಣ್ಯ ರಕ್ಷಕ ಅಶೋಕ್, ಹಾಗೂ ಅರಣ್ಯ ವೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆನೆ ರಸ್ತೆ ಬದಿಯಲ್ಲಿ ಇದ್ದು,ಸುಬ್ರಹ್ಮಣ್ಯದಿಂದ ಸುಳ್ಯ ಕಡೆಗೆ ಸಂಚರಿಸುವ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here