ಡಾ.ಪಿ ಎಸ್‌ ಕೃಷ್ಣ ಕುಮಾರ್‌ ರವರಿಗೆ ಬೀಳ್ಕೊಡುಗೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ವಿಭಾಗ ಮುಖ್ಯಸ್ಥರೂ ಕಾಲೇಜಿನ ಉಪಪ್ರಾಂಶುಪಾಲರೂ ಆಗಿದ್ದ ಡಾ| ಪಿ ಎಸ್‌ ಕೃಷ್ಣ ಕುಮಾರ್‌ ರವರಿಗೆ ಬೀಳ್ಕೊಡುಗೆ ಹಾಗೂ ರಸಾಯನಶಾಸ್ತ್ರ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ಡಾ| ಪಿ ಎಸ್‌ ಕೃಷ್ಣ ಕುಮಾರ್‌ರವರ ದೀರ್ಘಕಾಲದ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ತಿಳಿಸಿ ಅವರನ್ನು ಅಭಿನಂದಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪರೀಕ್ಷೆಗಳಲ್ಲಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿದ ಸುಧನ್ವ ಶ್ಯಾಮ್‌ ಹಾಗೂ ಐಐಟಿ ಜಾಮ್‌ ಪರೀಕ್ಷೆಯಲ್ಲಿ ತೇರ್ಗೆಡೆಹೊಂದಿದ ಅಶ್ವತ್ಥ್‌ ಕೃಷ್ಣ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ| ಪಿ ಎಸ್‌ ಕೃಷ್ಣ ಕುಮಾರ್‌ ರವರಿಗೆ ಡಾ| ಮಾಲಿನಿ ಕೆ ಯವರು ಅಭಿನಂದನಾ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಮೀನಾಕ್ಷಿ ಮತ್ತು ಸುಧನ್ವ ಶ್ಯಾಮ್‌ ರವರು ಗುರುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪಪ್ರಾಂಶುಪಾಲರಾದ ಡಾ| ವಿಜಯ ಕುಮಾರ್‌ ಮೊಳೆಯಾರರವರು ಡಾ| ಪಿ ಎಸ್‌ ಕೃಷ್ಣ ಕುಮಾರ್‌ರೊಂದಿಗೆ ಒಡನಾಟದ ಸವಿನೆನಪುಗಳನ್ನು ಹಂಚಿಕೊಂಡರು. ನಂತರ ಮಾತನಾಡಿದ ಡಾ| ಪಿ ಎಸ್‌ ಕೃಷ್ಣ ಕುಮಾರ್‌ರವರು “ಜೀವನದಲ್ಲಿ ಯೋಗ ಹಾಗೂ ಯೋಗ್ಯತೆ ಇರಬೇಕು. ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹೆತ್ತವರು, ಗೆಳೆಯರು ಗುರುಗಳು ಹಾಗೂ ಸಮಾಜದ ಪಾತ್ರ ಮಹತ್ತರವಾದುದು” ಎಂದು ಹೇಳಿದರು.

ಬಿ ಎಸ್ಸಿ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಎಡ್ವಿನ್‌ ಡಿಸೋಜ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಮಾಲಿನಿ ಕೆ ವಂದಿಸಿದರು. ವಿದ್ಯಾರ್ಥಿನಿ ಸಮೀಯ ಬಾನು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here