ಉಡುಪಿ: ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಫಿಲೋಮಿನಾದ ಯಶ್ವಿನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಉಡುಪಿ ಅಜ್ಜರಕಾಡು ಇಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಯಶ್ವಿನ್ ರವರು ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಮಟ್ಟದ ಸ್ಪರ್ಧೆಯು ಛತ್ತೀಸ್ಗಡದ ಪಂಚ್ಕುಲ ಇಲ್ಲಿ ನಡೆಯಲಿದ್ದು ಯಶ್ವಿನ್ ರವರು ಭಾಗವಹಿಸಲಿದ್ದಾರೆ. ಯಶ್ವಿನ್ ರವರು ಪದವಿ ಪೂರ್ವ ಕಾಲೇಜಿನಲ್ಲೂ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಇದೇ ಟೂರ್ನಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ವರ್ಷಾರವರು ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ. ಯಶ್ವಿನ್ ರವರು ಪೆರ್ಲಂಪಾಡಿ ಕೊಳ್ತಿಗೆ ನಿವಾಸಿ ರಾಘವ ಪೂಜಾರಿ ಹಾಗೂ ವನಿತಾ ಕೆ.ರವರ ಪುತ್ರ. ವರ್ಷಾರವರು ದರ್ಬೆ ಪಾಂಗ್ಲಾಯಿ ನಿವಾಸಿ ಸುಂದರ ಗೌಡ ಹಾಗೂ ವಾರಿಜರವರ ಪುತ್ರಿ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ|ಎಲ್ಯಾಸ್ ಪಿಂಟೊ ಹಾಗೂ ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here