ಮಾಣಿ: ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಾಗಾರ

0

ಡಿ. ವೀರೇಂದ್ರ ಹೆಗ್ಗಡೆಯವರು ನಡೆಸುವ ಪ್ರತಿಯೊಂದು ಕಾರ್ಯವೂ ಶ್ಲಾಘನೀಯ: ರಾಜಾರಾಮ ಶೆಟ್ಟಿ ಕೊಲ್ಪೆಗುತ್ತು

ವಿಟ್ಲ: ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಾಣಿ ವಲಯದ ಮಾಣಿ ಒಕ್ಕೂಟದ ವತಿಯಿಂದ ಮಾಣಿ ಗ್ರಾ.ಪಂ. ಸಭಾಂಗಣದಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು.
ಮಾಣಿ ವಲಯದ ಜನಜಾಗೃತಿ ವಲಯಾಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೊಲ್ಪೆಗುತ್ತುರವರು ಮಾತನಾಡಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಡೆಸುವ ಪ್ರತಿಯೊಂದು ಕಾರ್ಯವೂ ಶ್ಲಾಘನೀಯ. ನಾವೂ ಅವರ ಮಾರ್ಗದರ್ಶನ ಪಡೆದು ಸಮಾಜಕ್ಕೆ ನಮ್ಮಿಂದಾದ ಸಹಕಾರವನ್ನು ನೀಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಾಣಿ ವಲಯದ ಜನಜಾಗೃತಿ ಸದಸ್ಯರಾದ ಬಾಲಕೃಷ್ಣ ಆಳ್ವ ರವರು ಮಾತನಾಡಿ ಜನಜಾಗೃತಿ ವೇದಿಕೆ ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ ಸಂಘದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಮಂಜಪ್ಪ ನಾಯ್ಕ, ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಲಾಯ್ಲಾಬಿ ಸ್ವಾಗತಿಸಿ, ಸರಿತಾ ವಂದಿಸಿದರು. ಪ್ರಮಿಳಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here