ಪುಣ್ಚಪ್ಪಾಡಿ ಶಾಲಾ ಸಂಸತ್ತು ಚುನಾವಣೆ – ಮುಖ್ಯಮಂತ್ರಿ ಸವಿನ್ ಎಸ್, ಉಪಮುಖ್ಯ ಮಂತ್ರಿ ತನ್ವಿತ್ ಪಿ ಎಸ್

0

ಸವಣೂರು: ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಘೋಷಣೆ, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಗುರುತಿನ ಚಿಹ್ನೆಗಳ ಹಂಚಿಕೆ, ಚುನಾವಣಾ ಪ್ರಚಾರ ನಡೆಸಲಾಯಿತು. ಅಂತಿಮವಾಗಿ ಮತದಾನ ಕೇಂದ್ರದಲ್ಲಿ ಮತದಾನ ನಡೆಸಿ ಫಲಿತಾಂಶ ಘೋಷಣೆ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಶಾಲಾ ಮುಖ್ಯಮಂತ್ರಿಯಾಗಿ ಸವಿನ್ ಎಸ್ 7ನೇ‌ ತರಗತಿ, ಮತ್ತು ಉಪಮುಖ್ಯಮಂತ್ರಿಯಾಗಿ ತನ್ವಿತ್ ಪಿ ಎಸ್ 6ನೇ ತರಗತಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ ಸಂಕೇತ್ ಎಲ್ ಬಿ , ವಿರೋಧ ಪಕ್ಷದ ಉಪ ನಾಯಕಿಯಾಗಿ ಯಶ್ವಿ, ಶಿಕ್ಷಣ ಮಂತ್ರಿಯಾಗಿ ಧನುಷ್ ಕೆ ಆರ್, ಉಪ ಶಿಕ್ಷಣ ಮಂತ್ರಿಯಾಗಿ ಷಣ್ಮುಖ ಬಿ, ಆರೋಗ್ಯಮಂತ್ರಿ ಜನನಿ, ಆಹಾರ ಮಂತ್ರಿ ವಿನುತ, ಕ್ರೀಡಾ ಮಂತ್ರಿ ವಿಜೇತ್,ಉಪ ಕ್ರೀಡಾ ಮಂತ್ರಿ ಪ್ರವೀಣ್, ರಕ್ಷಣಾ ಮಂತ್ರಿ ನಿಹಾಲ್, ಉಪ ರಕ್ಷಣಾ ಮಂತ್ರಿ ಕೃತಿ, ನೀರಾವರಿ ಮಂತ್ರಿ ಪ್ರೀತೇಶ್ , ಉಪ ನೀರಾವರಿ ಮಂತ್ರಿ ಜಸ್ವಿ. ಪಿ, ವಾರ್ತಾ ಮಂತ್ರಿ ಲಾವಣ್ಯ , ಕಾನೂನು ಮಂತ್ರಿ ಸಾನಿಧ್ಯ , ಗ್ರಂಥಾಲಯ ಮಂತ್ರಿ ಸನ್ನಿಧಿ ಎನ್,ಉಪ ಗ್ರಂಥಾಲಯ ಮಂತ್ರಿ ಸನ್ನಿಧಿ ಡಿ ರೈ, ತೋಟಗಾರಿಕಾ ಮಂತ್ರಿ ಯಕ್ಷಿತ್,ಉಪ ತೋಟಗಾರಿಕಾ ಮಂತ್ರಿ ಪ್ರತೀಕ್ಷ, ಸ್ವಚ್ಛತಾ ಮಂತ್ರಿ ತೃಪ್ತಿ ಡಿ ಎನ್ ,ಉಪ ಸ್ವಚ್ಛತಾ ಮಂತ್ರಿ ಸತ್ಯ ಕುಮಾರಿ ಹಾಗೂ ಸುಜನ್ಯ, ಸಾಂಸ್ಕೃತಿಕ ಮಂತ್ರಿ ಶಿವಾನಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಪ್ರಶಾಂತಿ ಆಯ್ಕೆಯಾದರು. ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಪ್ರಮಾಣ ವಚನ ಬೋಧಿಸಿದರು. ಹಾಗೂ ಪದವೀಧರ ಶಿಕ್ಷಕಿ ಶೋಭಾ , ಚಂದ್ರಿಕಾ ಎಸ್. ತೃಪ್ತಿ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here