ಪುತ್ತೂರು ಆರ್‌ಟಿಓದಲ್ಲಿ ರಾಜಸ್ವ ವಸೂಲಾತಿ ಇಳಿಕೆ- ಶೇ.99.87 ಸಾಧನೆ

0

ಪುತ್ತೂರು:ಸಾರಿಗೆ ಇಲಾಖೆಯ 2023-24ನೇ ಸಾಲಿನಲ್ಲಿ ವಾರ್ಷಿಕ ರಾಜಸ್ವ ವಸೂಲಾತಿ ಸಂಗ್ರಹಣೆಯಲ್ಲಿ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶೇ.99.87 ಸಾಧನೆ ಮಾಡಿದೆ.ಮೂರು ತಾಲೂಕುಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ 2023-24ನೇ ಸಾಲಿನಲ್ಲಿ ಒಟ್ಟು ರೂ.76,82,08,000 ರಾಜಸ್ವ ವಸೂಲಾತಿ ಗುರಿ ನೀಡಲಾಗಿದ್ದು ರೂ.76,72,12,565 ರಾಜಸ್ವ ಸಂಗ್ರಹವಾಗಿದೆ.


ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿದ್ದು 2023-24ನೇ ಸಾಲಿನಲ್ಲಿ ಸರಕಾರ ವಾರ್ಷಿಕ 76,82,08,000 ಹಾಗೂ ಮಾಸಿಕವಾಗಿ ಸರಾಸರಿ ರೂ.6,40,17,000 ರಾಜಸ್ವ ವಸೂಲಾತಿ ಗುರಿ ನೀಡಲಾಗಿತ್ತು.ಆರ್ಥಿಕ ವರ್ಷದ ಪ್ರಾರಂಭದ ಏಪ್ರಿಲ್‌ನಲ್ಲಿ ರೂ.5,02,59,596, ಮೇ ತಿಂಗಳಲ್ಲಿ ರೂ.5,19,62,013, ಜೂನ್‌ನಲ್ಲಿ ರೂ.6,17,80,521, ಜುಲೈನಲ್ಲಿ 5,22,14,587, ಆಗಸ್ಟ್ನಲ್ಲಿ 6,34,60,500, ಸಪ್ಟೆಂಬರ್‌ನಲ್ಲಿ 7,23,69,007, ಅಕ್ಟೋಬರ್‌ನಲ್ಲಿ 6,75,14,002, ನವಂಬರ್‌ನಲ್ಲಿ 7,58,09,676, ಡಿಸೆಂಬರ್‌ನಲ್ಲಿ 5,60,62,355, ಜನವರಿಯಲ್ಲಿ 7,71,23,796, ಫೆಬ್ರವರಿಯಲ್ಲಿ 6,33,58,374 ಹಾಗೂ ಮಾರ್ಚ್ ತಿಂಗಳಲ್ಲಿ ರೂ.7,52,98,138 ರಾಜಸ್ವ ವಸೂಲಾತಿ ಸಂಗ್ರಹವಾಗಿದೆ.ಈ ಪೈಕಿ ಸಪ್ಟಂಬರ್, ಅಕ್ಟೋಬರ್, ನವಂಬರ್, ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸರಕಾರ ನೀಡಿದ ಮಾಸಿಕ ಗುರಿಗಿಂತ ಅಧಿಕ ತೆರಿಗೆ ಸಂಗ್ರಹಿಸಿದೆ.ಕಳೆದ ಹಲವು ವರ್ಷಗಳಲ್ಲಿ ಸರಕಾರ ನಿಗದಿಪಡಿಸಿದ ಗುರಿ ಮೀರಿ ವಸೂಲಾತಿಯಾಗುತ್ತಿದ್ದು ಗತ ಸಾಲಿನಲ್ಲಿ ವಸೂಲಾತಿ ಗುರಿ ತಲುಪಲಾಗದೆ ಕೊಂಚ ಇಳಿಕೆ ಕಂಡಿದೆ.


2023-24ನೇ ಸಾಲಿನಲ್ಲಿ ಒಟ್ಟು 5,424 ವಾಹನಗಳನ್ನು ತನಿಖೆ ಮಾಡಿದ್ದು ಇದರಲ್ಲಿ 1,303 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, 3 ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದ ವಾಹನಗಳ ಪೈಕಿ ದಂಡ ಹಾಗೂ ತೆರಿಗೆ ಸೇರಿದಂತೆ ಒಟ್ಟು ರೂ.22,38,941 ಸಂಗ್ರಹವಾಗಿದೆ.9217 ಹೊಸ ವಾಹನಗಳ ನೋಂದಣಿ: ಕಳೆದ ಆರ್ಥಿಕ ವರ್ಷದಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಹೊಸದಾಗಿ ಒಟ್ಟು 9,217 ವಾಹನಗಳು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆಗೊಂಡಿವೆ.6220 51-300ಸಿಸಿ ಮೋಟಾರ್ ಸೈಕಲ್, 37 300ಸಿಸಿ ಮೇಲ್ಪಟ್ಟ ಮೋಟಾರು ಸೈಕಲ್, 1802 ಮೋಟಾರು ಕಾರು, 646 ಆಟೋ ರಿಕ್ಷಾ, 74 ಮೋಟಾರ್ ಕ್ಯಾಬ್, 1 ಆಮ್ನಿ ಬಸ್ಸು, 1 ಪಬ್ಲಿಕ್ ಕ್ಯಾರಿಯರ್, 7 ಟ್ರಾಕ್ರ‍್ಸ್, 114 ಟಿಪ್ಪರ್‌ಗಳು, 126 ಎಲ್‌ಪಿಜಿ ತ್ರಿ ವ್ಹೀಲರ್, 1 ಆಂಬ್ಯುಲೆನ್ಸ್, 155 ಎಲ್‌ಪಿಸಿ 4 ವ್ಹೀಲರ್, 1 ಮ್ಯಾಕ್ಸಿಕ್ಯಾಬ್, 25 ಮಲ್ಟಿಎಕ್ಸೆಲ್/ಆರ್ಟಿಕುಲೇಟೆಡ್, 2 ಜೇಸಿಬಿ ಹಾಗೂ 10 ಪಿಎಸ್‌ವಿ ವಾಹನಗಳು ನೊಂದಾವಣೆಗೊಂಡಿರುತ್ತದೆ ಎಂದು ಆರ್‌ಟಿಒ ಕಚೇರಿಯಿಂದ ಮಾಹಿತಿ ನೀಡಲಾಗಿದೆ.


127 ಲೈಸನ್ಸ್ ಅಮಾನತು
ಈ ಸಾಲಿನಲ್ಲಿ ಒಟ್ಟು 49 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲಿಸಿಕೊಂಡು 36 ಲೈಸನ್ಸ್ ಅಮಾನತು ಮಾಡಲಾಗಿದೆ.ಅಪಘಾತ, ಹೆಲ್ಮೆಟ್ ರಹಿತ ಬೈಕ್ ಸವಾರಿ, ಅಽಕ ವೇಗ, ಮೊಬೈಲ್ ಬಳಕೆ, ಮಿತಿಗಿಂತ ಅಧಿಕ ಪ್ರಯಾಣಿಕರ ಸಾಗಾಟ ಸೇರಿದಂತೆ ಇತರ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ 151 ಪ್ರಕರಣ ದಾಖಲಿಸಲಾಗಿದ್ದು 91 ಲೈಸನ್ಸ್ ಅಮಾನತು ಮಾಡಲಾಗಿದೆ.

LEAVE A REPLY

Please enter your comment!
Please enter your name here