ಜೂ.16: ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ 19ನೇ ವಾರ್ಷಿಕ ಸಮಾರಂಭ, ಸತ್ಯನಾರಾಯಣ ಪೂಜೆ

0

ಪುತ್ತೂರು:ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು ತಾಲೂಕಿ ಇದರ 19ನೇ ವಾರ್ಷಿಕ ಸಮಾರಂಭ-2024 ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜೂ.16ರಂದು ಬೆಳಿಗ್ಗೆ ಬಪ್ಪಳಿಗೆ ಜೈನಭವನದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಗಣಪತಿಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ನಡೆಯುವ ವಾರ್ಷಿಕ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೆರ್ಣೆ ವಾಣಿಯ/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ ಪಾಟಾಳಿ, ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮಗ್ರೋಡಿ, ನರಿಮೊಗರು, ಬೆಟ್ಟಂಪಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ವೈದ್ಯಾಧಿಕಾರಿ ಡಾ.ಭವ್ಯ ಎಂ., ಆಪಲ್ ಕಂಪನಿಯ ಸೀನಿಯರ್ ಮ್ಯಾನೇಜರ್ ದೀಕ್ಷಿತ್ ಬೆಳ್ಳಾರೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸಾವಿತ್ರಿ ಎನ್., ನಿವೃತ್ತ ಯೋಧರಾದ ವಿದ್ಯಾಧರ ಎನ್.ಪಟ್ಟೆ, ಬಾಲಕೃಷ್ಣ ಎನ್, ಕಲ್ಲರ್ಪೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ನಾಗೇಶ್ ಪಾಟಾಳಿ ಪೆರುವಾಯಿ, ಕೆದಂಬಾಡಿ, ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಿತೇಶ್ ಮೇರ್ಲ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ದೀಕ್ಷಿತ್ ಕಲ್ಲಾಜೆಯವರಿಗೆ ಸನ್ಮಾನ ಸಮಾಜದ ಹಿರಿಯ ಸದಸ್ಯರಾದ ಸುಶೀಲ ಚಂದ ಪಾಟಾಳಿ ದಂಪತಿ ಅಮೈ, ಸುಶೀಲ ಮಹಾಲಿಂಗ ಪಾಟಾಳಿ ದಂಪತಿ ಶರವು, ಲಲಿತಾ ಶಂಕರ ಪಾಟಾಳಿ ದಂಪತಿ ಈಶ್ವರಮಂಗಲ, ಸಿದ್ದಮ್ಮ ಕಣ್ಣ ಪಾಟಾಳಿ ದಂಪತಿ ಬೈರಮೂಲೆ, ಯಮುನಾ ಮಯ್ಯಾಳ, ಗೋಪಿ ಸರವು, ಮಾಕು ದೇರ್ಲ, ಪರಮೇಶ್ವರಿ ದೇರ್ಲ, ಕಲ್ಯಾಣಿ ದೇರ್ಲ, ಸೀತು ಮುಕ್ರಂಪಾಡಿ ಇವರುಗಳಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ವಿವಿಧ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಹಾಗೂ ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here