ವಿಟ್ಲ: ಆಧುನಿಕ ಜಗತ್ತಿಗೆ ಪೂರಕವಾಗುವ ಮಾಹಿತಿ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳನ್ನು ಉನ್ನತೀಕರಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ ತಂತ್ರಜ್ಞಾನಗಳ ಬಳಕೆ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಆಸಕ್ತರಾಗುವಂತೆ ಮಾಡುತ್ತಿದೆ.
ಈ ನೆಲೆಯಲ್ಲಿ ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಯೊಂದು ಈ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿರುವುದು ಪ್ರಥಮ. ಸುಮಾರು 1200 ವಿದ್ಯಾರ್ಥಿಗಳಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಸೌಲಭ್ಯವನ್ನು ಸಂಸ್ಥೆಯ ಆಡಳಿತ ಮಂಡಳಿಯು ಮಾಡಿಕೊಡುತ್ತಿದೆ. ಸ್ಟೆಮ್ ರೋಬೋ ಸಂಸ್ಥೆಯ ಸಹಯೋಗದೊಂದಿಗೆ ನಡೆಯುವ ಜೇಸಿ ರೋಬೋಟಿಕ್ ಲ್ಯಾಬ್ ನ ಉದ್ಘಾಟನಾ ಸಮಾರಂಭವು ಜೂ.15ರಂದು ನಡೆಯಲಿದೆ. ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಮೋಹನ್ ಆಳ್ವ ರವರು ಲ್ಯಾಬ್ ಅನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಕೂಡೂರು ಹಾಗೂ ಸ್ಟೆಮ್ ರೋಬೋ ಸಂಸ್ಥೆಯ ಮ್ಯಾನೇಜರ್ ಸರ್ವೇಶ್ ನಾಯಕ್ ರವರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.