ಕೆಯ್ಯೂರು : ಮಾಡರ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ 2023-24ನೇ ಸಾಲಿನ ಸಿಎಸ್ಆರ್ ನಿಧಿಯಿಂದ ಕೆಪಿಎಸ್ ಪದವಿಪೂರ್ವ ಕಾಲೇಜು ಕೆಯ್ಯೂರಿಗೆ ಸುಮಾರು 3.2ಲಕ್ಷದ ಪ್ರಯೋಗಾಲಯ ಪರಿಕರಗಳು, ಪೀಠೋಪಕರಣಗಳು, ಕಂಪ್ಯೂಟರ್, ಪ್ರಿಂಟರ್ ಮತ್ತು ನೋಟ್ ಪುಸ್ತಕಗಳ ಹಸ್ತಾಂತರ ಹಾಗೂ ಪ್ರಯೋಗಾಲಯ ಕೊಠಡಿಗಳ ಉದ್ಘಾಟನೆಯು ಕೆಪಿಎಸ್ ಕೆಯ್ಯೂರು ಸಭಾಂಗಣದಲ್ಲಿ ಜರುಗಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಕಾರ್ಯಾಧ್ಯಕ್ಷ ಎ ಕೆ ಜಯರಾಮ ರೈ ಅಧ್ಯಕ್ಷತೆ ವಹಿಸಿ,ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಯೋಗಾಲಯ ಕೊಠಡಿಗಳನ್ನು ಉದ್ಘಾಟಿಸಿದರು. ಮಾಡರ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಫೈನಾನ್ಸ್ ಡೈರೆಕ್ಟರ್ ಶ್ರೀನಿಧಿ ಎಚ್ ಎಸ್ ಕೊಡುಗೆಗಳನ್ನು ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಕೆಪಿಎಸ್ ಕೆಯ್ಯೂರು ಸಂಸ್ಥೆಯ ವತಿಯಿಂದ ಶ್ರೀನಿಧಿ ಹೆಚ್ಎಸ್ ಅವರನ್ನು ಗೌರವಿಸಲಾಯಿತು. ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯಗುರು ಬಾಬು ಎಂ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಜೀವಶಾಸ್ತ್ರ ಉಪನ್ಯಾಸಕಿ ವತ್ಸಲಾಕುಮಾರಿ ಎಂ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿ,ವಂದಿಸಿ, ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಕಾರ್ಯಕ್ರಮ ನಿರ್ವಹಿಸಿದರು.