ಕೆಯ್ಯೂರು: 2024-25 ನೇ ಸಾಲಿನ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕ ಸ್ಥಾನಕ್ಕಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಶಾಲಾ ನಾಯಕ ಸ್ಥಾನಕ್ಕೆ ನಾಲ್ಕು ಹಾಗೂ ಉಪನಾಯಕ ಸ್ಥಾನಕ್ಕೆ ಆರು ಜನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಅಭ್ಯರ್ಥಿಗಳು ಸಹಪಾಠಿಗಳನ್ನುದ್ದೇಶಿಸಿ ತಮ್ಮ ಪ್ರಣಾಳಿಕೆ ಮಂಡಿಸಿ, ಭಾಷಣ ಮಾಡಿದರು. ವಿದ್ಯುನ್ಮಾನ ಮತ ಯಂತ್ರದ ಮೊಬೈಲ್ ಆ್ಯಪ್ ಬಳಸಿ ಚುನಾವಣೆ ನಡೆಸಲಾಯಿತು. ನೈಜ ಚುನಾವಣೆಯ ಮತಯಂತ್ರದ ಮಾದರಿಯ ಆ್ಯಫ್ ನಲ್ಲಿ ಬಟನ್ ಒತ್ತಿ ಮತ ಹಾಕಿ ಬೀಪ್ ಸೌಂಡ್ ಹಾಗೂ ವಿವಿಪ್ಯಾಟ್ ನಲ್ಲಿ ಬೀಳುವ ಚಿಹ್ನೆಯ ಸ್ಲಿಪ್ ಗಳನ್ನು ನೋಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಮೋಲಿ ವಿಲ್ಮಾ ಪಿಂಟೊರವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳೇ ಮತಗಟ್ಟೆಯ ಅಧಿಕಾರಿಗಳಾಗಿ ಚುನಾವಣೆಯನ್ನು ನಡೆಸಿಕೊಟ್ಟರು. ಉಪ ಪ್ರಾಂಶುಪಾಲ ಕೆ ಎಸ್ ವಿನೋದ್ ಕುಮಾರ್ ಹಾಗೂ ಉಳಿದ ಶಿಕ್ಷಕರು ಸಹಕರಿಸಿದರು. ಕುತೂಹಲ ಮೂಡಿಸಿದ ಮತ ಎಣಿಕೆಯ ಬಳಿಕ 10ನೇ ತರಗತಿಯ ಮಹಮ್ಮದ್ ಸುಹೈಲ್ ಶಾಲಾ ನಾಯಕನಾಗಿಯೂ 9ನೇ ತರಗತಿಯ ಮುಹಮ್ಮದ್ ಸೂಫಿಯಾನ್ ಉಪನಾಯಕನಾಗಿಯೂ ಆಯ್ಕೆಯಾದರು. ಉಳಿದಂತೆ ವಿವಿಧ ಖಾತೆಗಳ ಮಂತ್ರಿಗಳು ಹಾಗೂ ಉಪಮಂತ್ರಿಗಳಾಗಿ, ಗೃಹ ಖಾತೆ ಮಂತ್ರಿಯಾಗಿ ಅಗ್ನೇಶ್ ವಿ ಆರ್, ಅನ್ಮೋಲ್ ಕೆ ವಿ, ಭವಿತ್ ಕುಮಾರ್
ಶಿಕ್ಷಣ ಮಂತ್ರಿಯಾಗಿ ರತಿನ್ ಕುಮಾರ್, ಧೃತಿ ರೈ, ನಿಶಾಂತ್ ಸಭಾಪತಿಯಾಗಿ ಅಸ್ಮಿತ ಎಸ್, ಸಾಂಸ್ಕೃತಿಕ ಮಂತ್ರಿಯಾಗಿ ಮೇಘನ ಸಿಂಧೂರ, ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿ ಚಿಂತನ, ಫಾತಿಮತ್ ನಾಫಿರ, ಪೂಜಾಶ್ರೀ, ಆಹಾರ ಮಂತ್ರಿಯಾಗಿ, ಮನ್ವಿತ್ ಡಿ ಆರ್, ಸುಶಾಂತ್, ಸಂಪತ್, ಆರೋಗ್ಯ ಮಂತ್ರಿಯಾಗಿ ಸ್ಫೂರ್ತಿ ಬಿ ವಿ, ತನುಷ ಡಿಸೋಜಾ, ಪ್ರೀತೇಶ್, ಫಾತಿಮತ್ ಶಜಾ, ಸ್ವಚ್ಛತಾ ಮಂತ್ರಿಯಾಗಿ ಸುಮಂತ್, ಪವನ್ ರಾಜ್, ಫಾತಿಮತ್ ಆಫಿಯ, ಹರ್ಷಿತಾ, ಕ್ರೀಡಾ ಮಂತ್ರಿಯಾಗಿ ಜನನಿ, ಹಿಮೇಶ್, ಮಹಮ್ಮದ್ ಫೈಝಲ್, ನೀರಾವರಿ ಮಂತ್ರಿಯಾಗಿ ಮನ್ವಿತ್, ತನುಷ್, ದೀಕ್ಷಿತ್ ರೈ, ಕೃಷಿ ಮಂತ್ರಿಯಾಗಿ ಕೀರ್ತನ್, ಜೀತನ್, ಧನುಷ್, ವಿರೋಧ ಪಕ್ಷದ ನಾಯಕ ದೇವಿಪ್ರಸಾದ್, ಸದಸ್ಯರಾಗಿ ಮಹಮ್ಮದ್ ಅನ್ಸಾರ್, ಅಫ್ರೀನಾ, ಜಸ್ಮಿತಾ,ನಿಶಾಂತ್,ಸನ್ಮಿತ್, ನಿಶ್ಮಿತಾ, ಮಹಮ್ಮದ್ ಅಂಜಾದ್, ದಿಶಾ ಎಂ ಡಿ, ರಯಾನುಲ್ಲ ಶರೀಫ್, ಅನ್ವಿತಾ ರೈ ಅಯ್ಕೆಯಾದರು.ಶಾಲೆಯ ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳನ್ನಾಗಿ ಮಾಡಲಾಯಿತು. ನೇತಾಜಿ ತಂಡ ತೇಜಸ್ ಪಿ.ಎಂ, ಸಿಂಚನಾ ಶಿವಾಜಿ ತಂಡ ರೋಯಲ್ ಡಿಸೋಜ,ಸ್ಮಿತಾ ಯು ಜವಾಹರ್ ತಂಡ. ಮಹಮ್ಮದ್ ತ್ವಾಹಾ, ಫಾತಿಮತ್ ಸಿಫಾ ಸರ್ದಾರ್ ತಂಡ ತೇಜಸ್, ಅಸ್ಮಿತಾ ಎಸ್. ಅಯ್ಕೆ ಮಾಡಲಾಯಿತು.