ಆಸ್ಟ್ರೇಲಿಯಾದಲ್ಲಿ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್-ಪುತ್ತೂರು ಅಕ್ವೆಟಿಕ್ ಕ್ಲಬ್‌ನ ನಾಲ್ವರು ಈಜುಪಟುಗಳು ಆಯ್ಕೆ

0

ಪುತ್ತೂರು: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಈಜುಪಟುಗಳಾದ ಸ್ವೀಕೃತ್ ಆನಂದ್, ಅನ್ವಿತ್ ರೈ ಬಾರಿಕೆ, ದಿಗಂತ್ ವಿ.ಎಸ್. ಹಾಗೂ ಧನ್ವಿತ್‌ರವರು ಭಾರತ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ.


ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ(ಆರ್‌ಎಲ್‌ಎಸ್‌ಎಸ್) ವತಿಯಿಂದ ಮೇ.15 ರಿಂದ 19ರ ತನಕ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರಿನ ಈಜುಪಟುಗಳಾದ ಸ್ವೀಕೃತ್ ಆನಂದ್ ಬೊಳುವಾರಿನ ಆಸ್ಕರ್ ಆನಂದ್ ಮತ್ತು ಸೆನೋರಿಟಾ ಆನಂದ್ ದಂಪತಿ ಪುತ್ರ. ಅನ್ವಿತ್ ರೈ ಬಾರಿಕೆಯವರು ದರ್ಬೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಈತ ಪರ್ಪುಂಜ ಬಾರಿಕೆ ಅನಿಲ್ ಕುಮಾರ್ ರೈ ಮತ್ತು ದಿವ್ಯಾ ಅನಿಲ್ ರೈ ದಂಪತಿ ಪುತ್ರ. ದಿಗಂತ್ ವಿ.ಎಸ್‌ರವರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಈತ ಎಸ್‌ಸಿಡಿಸಿಸಿ ಬ್ಯಾಂಕ್ ಕುಂಬ್ರ ಶಾಖಾ ವ್ಯವಸ್ಥಾಪಕ ಕೂರ್ನಡ್ಕದ ವಿಶ್ವನಾಥ ಎಸ್ ಮತ್ತು ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಹಿರಿಯ ವ್ಯವಸ್ಥಾಪಕಿ ವೀಣಾ ಕುಮಾರಿ ಕೆ ದಂಪತಿ ಪುತ್ರ. ಧನ್ವಿತ್ರವರು ಅಂಬಿಕಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಇವರು ಕೆಮ್ಮಿಂಜೆ ಪ್ರಗತಿ ಬಡಾವಣೆಯ ನಿವಾಸಿ, ಎಸ್‌ಸಿಡಿಸಿಸಿ ಬ್ಯಾಂಕ್ ದರ್ಬೆ ಶಾಖಾ ವ್ಯವಸ್ಥಾಪಕ ಕೇಶವ ಕುಮಾರ್ ಮತ್ತು ಎಸ್‌ಡಿಸಿಸಿ ಬ್ಯಾಂಕ್ ಕಲ್ಲಡ್ಕ ಶಾಖಾ ವ್ಯವಸ್ಥಾಪಕಿ ಮೀನಾಕ್ಷಿ ದಂಪತಿ ಪುತ್ರ.
ಪರ್ಲಡ್ಕ ಬಾಲವನದ ಈಜುಕೊಳದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಹಿರಿಯ ತರಬೇತುದಾರ ಪಾರ್ಥವಾರಣಾಸಿ, ನಿರೂಪ್ ಜಿ.ಆರ್., ರೋಹಿತ್ ಪಿ. ಹಾಗೂ ದೀಕ್ಷಿತ್‌ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here