ಮುಂಡೂರು ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ನಾಯಕಿಯಾಗಿ ಅನ್ವಿತ, ಉಪನಾಯಕನಾಗಿ ಲಿಖಿತ್

ಪುತ್ತೂರು: ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಂತ್ರಿಮಂಡಲದ ಚುನಾವಣೆಯಲ್ಲಿ 2024-25ನೇ ಸಾಲಿನ ಶಾಲಾ ನಾಯಕಿಯಾಗಿ ಎಂಟನೇ ತರಗತಿಯ ಅನ್ವಿತ ಎ ಹಾಗೂ ಉಪನಾಯಕನಾಗಿ 7ನೇ ತರಗತಿಯ ಲಿಖಿತ್ ಪಿ ಇವರು ಆಯ್ಕೆಯಾದರು.

ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ರಾಝಿಕ್ ಹಾಗೂ ರಶ್ಮಿತ, ಉಪಶಿಕ್ಷಣಮಂತ್ರಿಯಾಗಿ ತೇಜಸ್ ಹಾಗೂ ಫರ್ಝಾನ, ಆರೋಗ್ಯಮಂತ್ರಿಯಾಗಿ ಪೂರ್ಣಿಮಾ ಹಾಗೂ ಶಾನಿದ, ಉಪ ಆರೋಗ್ಯಮಂತ್ರಿಯಾಗಿ ಕೀರ್ತನ್ ಹಾಗೂ ನಮಿತ್, ಸಾಂಸ್ಕೃತಿಕ ಮಂತ್ರಿಯಾಗಿ ವೈಭವಿ, ಉಪಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಾ, ತೋಟಗಾರಿಕೆ ಮಂತ್ರಿಯಾಗಿ ಪುರುಷೋತ್ತಮ, ಉಪತೋಟಗಾರಿಕೆ ಮಂತ್ರಿಯಾಗಿ ಹಾರ್ದಿಕ್ ಹಾಗೂ ಭವಿತ್, ಕ್ರೀಡಾಮಂತ್ರಿಯಾಗಿ ಫಾರಿಸ ಹಾಗೂ ತಶ್‌ರೀಫ, ಉಪ ಕ್ರೀಡಾಮಂತ್ರಿಯಾಗಿ ಶರಣ್ಯಶ್ರೀ ಹಾಗೂ ಮೌಶೂಫ, ಗ್ರಹಮಂತ್ರಿಯಾಗಿ ದೀಕ್ಷಾ ಹಾಗೂ ಹಫೀಝ್ ಉಪಗ್ರಹಮಂತ್ರಿಯಾಗಿ ಧನುಷ್ ಹಾಗೂ ರಿಝ್ವಾನ್, ರಕ್ಷಣಾ ಮಂತ್ರಿಯಾಗಿ ನಾಗರಾಜ್ ಹಾಗೂ ಫಾತಿಮತ್ ತಸ್ರೀಪ, ಉಪ ರಕ್ಷಣಮಂತ್ರಿಯಾಗಿ ಕಾವ್ಯಶ್ರೀ ಹರ್ಷತ್ ಹಾಗೂ ಆಫ್ರೀಝ್, ನೀರಾವರಿ ಮಂತ್ರಿಯಾಗಿ ಹನ, ಅಸ್ನಾ ಹಾಗೂ ರಕ್ಷಿತ್, ಉಪನೀರಾವರಿ ಮಂತ್ರಿಯಾಗಿ ಪ್ರತಿಮಾ, ಪ್ರಿಶಾ ಹಾಗೂ ಅಭಿನವ್, ಗ್ರಂಥಾಲಯ ಮಂತ್ರಿಯಾಗಿ ಹಲೀಮತ್ ಹಿಬಾ, ಉಪ ಗ್ರಂಥಾಲಯ ಮಂತ್ರಿಯಾಗಿ ನಿರೀಕ್ಷಾ ಅವರನ್ನು ಆಯ್ಕೆ ಮಾಡಲಾಯಿತು. ಸಭಾಪತಿಯಾಗಿ ಸಮ್ನ ಅವರನ್ನು ಆಯ್ಕೆ ಮಾಡಲಾಯಿತು. ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಯಿತು ಎಂದು ಶಾಲಾ ಮುಖ್ಯಗುರು ವಿಜಯಾ ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here