ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಮಂತ್ರಿ ಮಂಡಲ ರಚನೆ

0

ಬಡಗನ್ನೂರು  ಸುಳ್ಯಪದವು ಸರ್ವೋದಯ  ವಿದ್ಯಾವರ್ಧಕ ಸಂಘ (ರಿ)  ಇದರ ವತಿಯಿಂದ ಮುನ್ನಡೆಸುತ್ತಿರುವ.ಸರ್ವೋದಯ ಪ್ರೌಢಶಾಲಾ ಹಾಗೂ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು  2024-25  ಸಾರ್ವತ್ರಿಕ  ಮತದಾನ ಮಾದರಿಯಲ್ಲಿ ಚುನಾವಣಾ ಘೋಷಣೆ, ಮಾಡಲಾಯಿತು. ಮತದಾನ ಕೇಂದ್ರದಲ್ಲಿ ಮೊಬೈಲ್ ಇವಿಎಂ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಮತದಾನದ ಅರಿವು ಮೂಡಿಸಲಾಯಿತು.4 ತರಗತಿಯಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳು ಮತದಾನ ಮಾಡಿದರು. ಕೊನೆಯಲ್ಲಿ ಫಲಿತಾಂಶ ಘೋಷಣೆಯ ಮೂಲಕ ಶಾಲಾ ನಾಯಕ , ಉಪನಾಯಕ ಹಾಗೂ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. 

ಶಾಲಾ ನಾಯಕನಾಗಿ ಜಿತೇಶ್,ಕೆ.ಎಸ್ 10 ತರಗತಿ, ಉಪನಾಯಕರಾಗಿ ಪಾತಿಮತ್ ಅಮ್ನ,  9ನೇ ತರಗತಿ ಹಾಗೂ ಸತ್ಯಜಿತ್‌ ,8ನೇ ತರಗತಿ ಅಯ್ಕೆ ಮಾಡಲಾಯಿತು.

ವಿರೋಧ ಪಕ್ಷದ ನಾಯಕಿ ಚಿತ್ತಾಶ್ರೀ, 10 ತರಗತಿ,  ಉಪನಾಯಕ ತೇಜಸ್ ಆಯ್ಕೆಯಾಗಿದ್ದಾರೆ. ಸಭಾಧ್ಯಕ್ಷರಾಗಿ ಸಾರಿಕಾ ರೈ  ಹಾಗೂ ಇನ್ನುಳಿದ ಮಂತ್ರಿಗಳಾಗಿ ಧನುಷ್,ದರ್ಶನ್, ರಕ್ಷಿತ್,ಸರ್ವೆಸ್ ಬಹುಮಾನ್, ಹೃದಯ್, ಗಣೇಶ್ ಪ್ರಸಾದ್, ಪಾತಿಮತ್ ರಮೀಸಾ, ಪಾತಿಮತ್ ಸನಾ,  10ನೇ ತರಗತಿ, ಶ್ರವಿತ್ ಕುಮಾರ್,ರಜತ್, ಅದಿತ್ಯ,ಅದ್ವಿತ್,ದಿಶಾಂತ್,ಕೃಪಾ, ಚೈತ್ರಾ 9 ನೇ ತರಗತಿ ಅಯ್ಕಯಾಗಿರುತ್ತಾರೆ, ವಿರೋಧ ಪಕ್ಷದ ಸದಸ್ಯರಾಗಿ  ಕುಮಾರಿ ಸಿಂಚನಾ, ಭೂಮಿಕಾ, ನಂದನಾ ಅಯ್ಕೆ ಕೊಂಡಿದ್ದಾರೆ.

ಶಿಕ್ಷಕರಾದ ಕರುಣಾಕರ ಹಾಗೂ ಸುಹಾಸ್ ಬಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯ ಶಿಕ್ಷಕ ಸುಖೇಶ್ ರೈ ಕುತ್ಯಾಳ  ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here