ಬಡಗನ್ನೂರು ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಮಂತ್ರಿ ಮಂಡಲ ರಚನೆ

0

ಬಡಗನ್ನೂರು: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿ 2024-25 ನೇ ಸಾಲಿನ ಮಂತ್ರಿ ಮಂಡಲವನ್ನು ರಚಿಸಲಾಯಿತು. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಘೋಷಣೆ, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಗುರುತಿನ ಚಿಹ್ನೆ ಹಂಚಿಕೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ ನಡೆಸಲಾಯಿತು. ಅಂತಿಮವಾಗಿ ಮತದಾನ ಕೇಂದ್ರದಲ್ಲಿ ಮೊಬೈಲ್ ಇವಿಎಂ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಕೊನೆಯಲ್ಲಿ ಫಲಿತಾಂಶ ಘೋಷಣೆಯ ಮೂಲಕ ಶಾಲಾ ನಾಯಕ , ಉಪನಾಯಕ ಹಾಗೂ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. 

 ಶಾಲಾ ಮುಖ್ಯಮಂತ್ರಿಯಾಗಿ ಮನ್ವಿತ್ ಕುಮಾರ್ ಬಿಎಚ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಜಶ್ವಂತ್ ರೈ 7ನೇ ತರಗತಿ ಹಾಗೂ .ಸಭಾಧ್ಯಕ್ಷರಾಗಿ ವಿಸ್ಮಿತಾ ಎಂ, ಆಯ್ಕೆಯಾಗಿದ್ದಾರೆ.ವಿರೋಧ ಪಕ್ಷದ ನಾಯಕನಾಗಿ ಕಿಶನ್ ಕುಮಾರ್ ಕೆ,  ಗೃಹ ಮಂತ್ರಿಯಾಗಿ ಮಹಮ್ಮದ್ ಅನಸ್, ಉಪಗೃಹಮಂತ್ರಿಯಾಗಿ ಮುಹಮ್ಮದ್ ಆಶಿಕ್, ಆರೋಗ್ಯಮಂತ್ರಿಯಾಗಿ ದೇವಿಕಾ ಪಿ ಎಸ್, ಉಪ ಆರೋಗ್ಯಮಂತ್ರಿಯಾಗಿ ಸುಹಾ.ಕೆ, ವಾರ್ತಾ ಮಂತ್ರಿಯಾಗಿ ಗಾಯತ್ರಿ, ಫಾತಿಮಾ ರಯೀಫಾ, ಸಾಂಸ್ಕೃತಿಕ ಮಂತ್ರಿಯಾಗಿ ವಿಸ್ಮಿತ ಎಂ, ಉಪಸಾಂಸ್ಕೃತಿಕ ಮಂತ್ರಿಯಾಗಿ ವಿನ್ಯಶ್ರೀ, ಶಿಕ್ಷಣ ಮತ್ತು ಗ್ರಂಥಾಲಯ ಮಂತ್ರಿಯಾಗಿ ಫಾತಿಮತ್ ಶಿಫಾ, ಮೊಹಮ್ಮದ್ ಸಾಬಿತ್ ಪಿ ಝೆಡ್, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಶಫಾ, ಉಪಸ್ವಚ್ಚತಾ ಮಂತ್ರಿಯಾಗಿ ಲತೇಶ್, ನೀರಾವರಿ ಮಂತ್ರಿಯಾಗಿ ಕಾರ್ತಿಕ್, ಶ್ರವಣ್ ಕುಮಾರ್, ಕ್ರೀಡಾ ಮಂತ್ರಿಯಾಗಿ ಗೋಪಿನಾಥ ,ರೋಕ್ಷಿತ್ ಬಿ, ಕೃಷಿ ಮಂತ್ರಿಯಾಗಿ ಮಹಮದ್ ಶಫೀರ್, ಕಾರ್ತಿಕ್ ಪಿ, ಅಕ್ಷರದಾಸೋಹ ಮಂತ್ರಿಯಾಗಿ ಮನೀಶಾ, ಮುಹಮ್ಮದ್ ಶಾಮಿಲ್ ಎಂ, ಶೋಧನಾಮಂತ್ರಿಯಾಗಿ ತನ್ವಿತ್ ಎನ್, ಅನ್ವಿತ್  ಆಯ್ಕೆಯಾದರು.

   ಆಯ್ಕೆಯಾದ ಮಂತ್ರಿಗಳಿಗೆ ಶಾಲಾ ಮುಖ್ಯ ಗುರುಗಳಾದ ಹರಿಣಾಕ್ಷಿ ಎ ಪ್ರಮಾಣವಚನ ಬೋಧಿಸಿದರು .ಪದವೀಧರ ಶಿಕ್ಷಕಿ ವಿಜಯಲಕ್ಷ್ಮಿ ಚುನಾವಣೆಯ ಮಹತ್ವ ಗೌಪ್ಯತೆ ಬಗ್ಗೆ ತಿಳಿಸಿದರು. ಪದವೀಧರ ಶಿಕ್ಷಕಿ ರಮ್ಯಾ ಎಸ್ ಹಾಗೂ ಅತಿಥಿ ಶಿಕ್ಷಕಿ ಸೌಮ್ಯ ಚುನಾವಣೆ ಅಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here