ವೀರಮಂಗಲ ಪಿ. ಎಂ. ಶ್ರೀ ಶಾಲೆಯಲ್ಲಿ ರಂಗ ಶಿಕ್ಷಣ ಉದ್ಘಾಟನೆ

0

ಪುತ್ತೂರು : ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿ ಆಯೋಜಿಸಲಾಗಿದ್ದ ಶಿಕ್ಷಣದಲ್ಲಿ ರಂಗಭೂಮಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದೆ ವಸಂತ ಲಕ್ಷ್ಮೀ ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನದ ನಂತರದ ಅವಧಿಯಲ್ಲಿ ನಡೆಯುವ ರಂಗ ತರಬೇತಿ ಕಾರ್ಯಕ್ರಮವನ್ನು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಯಕ್ಷಗಾನ ,ಭರತನಾಟ್ಯ ತರಗತಿಗಳು ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ನಾಟಕ ತರಬೇತಿ ಕಾರ್ಯಾಗಾರವನ್ನು ಮಕ್ಕಳಿಗೆ ಉಚಿತವಾಗಿ ಆಯೋಜಿಸಲಾಗಿದೆ. ಚಾರುವಸಂತ ನಾಟಕ ಪ್ರಧಾನ ಪಾತ್ರಧಾರಿಯಾಗಿ ನಟಿಸಿದ ವಸಂತಲಕ್ಷ್ಮಿ ಇವರು ರಂಗಕರ್ಮಿ ಜೀವನ್‌ ರಾಂ ಸುಳ್ಯ ಇವರ ಗರಡಿಯಲ್ಲಿ ಪಳಗಿದವರು. ಇವರು ಉಚಿತವಾಗಿ ರಂಗ ಚಟುವಟಿಕೆಗಳನ್ನು ಧಾರೆಯೆರಲಿದ್ದಾರೆ. ಶಾಲಾ ಕಲಾ ಸಂಘದ ನಿರ್ದೇಶಕಿ ಶ್ರೀಲತಾ ಕಾರ್ಯಕ್ರಮ ಸಂಯೋಜಿಸಿದರು ಹಿರಿಯ ಶಿಕ್ಷಕಿ ಹರಿಣಾಕ್ಷಿ ಗೌರವಾರ್ಪಣೆ ಗೈದರು ಶಿಕ್ಷಕಿಯರಾದ ಶೋಭಾ ಕವಿತಾ ಹೇಮಾವತಿ ಶಿಲ್ಪರಾಣಿ,ಸೌಮ್ಯ ,ಸವಿತಾ ಸಂಚನಾ ಚಂದ್ರಾವತಿ ಸಹಕರಿಸಿದರು ಎಸ್‌ ಡಿ ಎಂ ಸಿ ಸದಸ್ಯರಾದ ಭವ್ಯ ಮತ್ತು ಚಿತ್ರಾ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here