ಕ್ಷೇತ್ರದ ಜನರ ಸೇವೆಗಾಗಿ ತಿಂಗಳಿಗೆ 3ರಿಂದ 5 ಲಕ್ಷ ಸಂಬಳ, ಸವಲತ್ತು ಪಡೆಯುವ ಶಾಸಕರು, ಸಂಸದರು ತಾವು ಪ್ರತಿ ತಿಂಗಳು ಮಾಡಿದ ಕೆಲಸದ ಲೆಕ್ಕ ಜನತೆಗೆ ನೀಡಬೇಕಲ್ಲವೇ?

0

ನಾವು ಶಾಲೆಗೆ ಟೀಚರನ್ನು ನೇಮಿಸಿದರೆ ಅಥವಾ ಯಾವುದೇ ನಾಸಂಸ್ಥೆಗೆ ಉದ್ಯೋಗಿಯನ್ನು, ಮ್ಯಾನೇಜರನ್ನು ನೇಮಿಸಿದಾಗ ಅವರ ಸಂಬಳಕ್ಕೆ ಅನುಗುಣವಾಗಿ ಅವರ ಕೆಲಸದ ರಿಪೋರ್ಟ್ ಕಾರ್ಡ್ ಪಡೆಯುತ್ತೇವೆ, ಪ್ರತೀ ತಿಂಗಳು ವಿಚಾರಿಸುತ್ತೇವೆ,ನೋಡಿಕೊಳ್ಳುತ್ತೇವೆ. ಸಂಸ್ಥೆಯ ಕಾನೂನು ಅನುಗುಣವಾಗಿ ಉತ್ತಮ ಕೆಲಸ, ಮಾಡಿದರೆ ಪ್ರೋತ್ಸಾಹ ದೊರಕುತ್ತದೆ. ಇಲ್ಲದಿದ್ದರೆ ಕೆಲಸದಿಂದಲೇ ತೆಗೆಯುತ್ತೇವೆ. ನಮ್ಮ ಆಡಳಿತಕ್ಕಾಗಿ ಶಾಸಕ, ಸಂಸದ, ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಆರಿಸುತ್ತೇವೆ. ಅವರು ಉತ್ತಮ ಕೆಲಸ ಮಾಡಲಿಕ್ಕಾಗಿ ಅವರಿಗೆ 3ರಿಂದ 5 ಲಕ್ಷದವರೆಗೆ ಸಂಬಳ ಸವಲತ್ತುಗಳು, ನಿವೃತ್ತಿಯಾದ ಮೇಲೂ ಜೀವನ ಪರ್ಯಂತ ಪೆನ್ಷನ್ ದೊರಕುತ್ತದೆ. ನಮ್ಮ ಸೇವೆಗಾಗಿ ನಾವು ಆರಿಸಿದ ಶಾಸಕರು, ಸಂಸದರು ಕಾನೂನಿನ ಅಡಿಯಲ್ಲಿ ಸಂವಿಧಾನಕ್ಕೆ ಪೂರಕವಾಗಿ ಜನಸೇವಕರಾಗಿ ಕೆಲಸ ಮಾಡಲು ಆಯ್ಕೆಯಾಗಿರುವವರಾಗಿದ್ದಾರೆ. ಅವರು ರಾಜರುಗಳಂತೆ ವರ್ತಿಸಬಾರದು. ತಮ್ಮನ್ನು ಆರಿಸಿದ ಮತದಾರ ರಾಜರುಗಳನ್ನು ಶೋಷಣೆ ಮಾಡುವ ಮತ್ತು ಅವರಿಗೆ ತೊಂದರೆ ನೀಡುವ ಕೆಲಸ ಮಾಡಬಾರದು. ಎಲ್ಲರ ಪ್ರತಿನಿಧಿಗಳಾಗಿ ಸ್ವಂತ ಲಾಭಕ್ಕಾಗಿ ಕೆಲಸ ಮಾಡದೆ ತಮ್ಮ ಕ್ಷೇತ್ರದ ಜನರ ಸೇವೆ ಮಾಡಬೇಕು, ಕೆಲಸ ಮಾಡಬೇಕು.ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಶಾಸಕರು, ಸಂಸದರು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡನ್ನು ಆಯಾ ಕ್ಷೇತ್ರದ ಜನತೆಗೆ ನೀಡುವಂತಾಗಬೇಕು. ಅದರ ಒಳಿತು ಮತ್ತು ಕೆಡುಕನ್ನು ಜನರು ವಿಮರ್ಶಿಸುವಂತಾಗಬೇಕು. ಅವರು ಆ ರೀತಿ ಮಾಡುವಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಮತದಾರ ರಾಜರಾದ ನಮ್ಮೆಲ್ಲರ ಕರ್ತವ್ಯವಲ್ಲವೇ?. ಹಾಗೆ ಮಾಡಿದರೆ ಮಾತ್ರ ನಾವು (ಜನರು) ನಿಜವಾದ ಅರ್ಥದಲ್ಲಿ ರಾಜರುಗಳಾಗುತ್ತೇವೆ. ಇಲ್ಲದಿದ್ದರೆ ಗುಲಾಮಗಿರಿ ಜೀವನವೇ ನಮ್ಮದಾಗುತ್ತದೆ ಎಂದು ಹೇಳಿದರೆ ತಪ್ಪಾದೀತೆ?.

ಆರ್‌ ಎಸ್‌ ಎಸ್ ವರಿಷ್ಠ ಮೋಹನ್ ಭಾಗವತ್ ಈ ಲೋಕಸಭಾ’ ಚುನಾವಣೆಯ ನಂತರ ಜನ ಪ್ರತಿನಿಧಿಗಳು ಅಹಂಕಾರಿಗಳಾಗಬಾರದು, ಜನಸೇವಕರಾಗಿ, ಗೌರವಯುತವಾಗಿ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಿಲ್ಲ. ಪ್ರತಿಪಕ್ಷ ಎಂದಾಗಬೇಕು, ಸಹಮತದ ಆಡಳಿತ ಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here